ಮಸೂದ್ ಅಜರ್’ಗೆ ನಿಷೇಧ ಹೇರುವಂತೆ ವಿಶ್ವಸಂಸ್ಥೆಗೆ ಅಮೆರಿಕಾ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Moulana-Masood-Azer

ಬೆಂಗಳೂರು, ಫೆ.07 : ಜಾಗತಿಕ ಮಟ್ಟದಲ್ಲಿ ಪಾಕ್ ಮತ್ತು ಚೀನಾಗೆ ಇಂದು ಮತ್ತೊಮ್ಮೆ ಭಾರಿ ಮುಖಭಂಗವಾಗಿದೆ. ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಸ್ಥಾಪಕ ಉಗ್ರ, ಪಠಾಣ್ ಕೋಟ್ ದಾಳಿಯ ರೂವಾರಿ ಮಸೂದ್ ಅಜರ್ ಗೆ ನಿಷೇಧ ಹೇರಬೇಕು ಎಂದು ಅಮೆರಿಕಾ ವಿಶ್ವಸಂಸ್ಥೆಗೆ ಮನವಿ ಮಾಡಿದೆ. ಇದರೊಂದಿಗೆ ಮಸೂದ್ ಅಜರ್ ಗೆ ನಿಷೇಧ ಹೇರಬೇಕು ಎಂದು ಕೋರಿದ್ದ ಭಾರತದ ವಾದಕ್ಕೆ ದೊಡ್ಡಣ್ಣನ ಸಾಥ್ ಸಿಕ್ಕಂತಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ನಂತರ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದು ಮಸೂದ್ ಅಝರ್ ಗೆ ನಿಷೇಧ ಹೇರಲು ಮುಂದಾಗಿರುವುದು ಭಾರತದ ನಿಲುವಿಗೆ ಬಲ ಬಂದಂತಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಒಟ್ಟು 1267 ಸದಸ್ಯರಲ್ಲಿ ಚೀನಾ ಮಾತ್ರ ಮಸೂದ್ ಅಝರ್ ಗೆ ನಿಷೇಧ ಹೇರುವುದನ್ನು ವಿರೋಧಿಸುತ್ತಿದೆ. ಕಳೆದ ಡಿಸೆಂಬರಿನಲ್ಲಿ ಮಸೂದ್ ಅಝರ್ ಗೆ ನಿಷೇಧ ಕೋರಿ ಭಾರತ ವಿಶ್ವಸಂಸ್ಥೆ ಮೆಟ್ಟಿಲು ಹತ್ತಿದಾಗಲೂ ಇದೇ ಚೀನಾ ಅಡ್ಡಗಾಲಾಗಿತ್ತು. ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿ ದೇಶಗಳ ಮನವೊಲಿಕೆಯಲ್ಲಿ ನಿರತವಾಗಿದ್ದು ವಿಶ್ವಸಂಸ್ಥೆಯಲ್ಲಿ ಮಸೂದ್ ಅಝರ್ ಗೆ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಹೊರಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin