ಮಸ್ತಾಗಿ ಮೂಡಿಬಂದಿವೆ ಮಾಸ್ತಿಗುಡಿ ಚಿತ್ರದ ಹಾಡುಗಳು

ಈ ಸುದ್ದಿಯನ್ನು ಶೇರ್ ಮಾಡಿ

2

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಕಳೆದವರ್ಷ ದೊಡ್ಡದಾಗಿ ಸುದ್ದಿಯಾದಂಥ ಚಿತ್ರ. ನಡೆಯಬಾರದ ಒಂದು ಘನಘೋರ ದುರಂತಕ್ಕೆ ಸಾಕ್ಷಿಯಾಗಿ ನಿಂತ ಈ ಚಿತ್ರ ಈಗ ಮತ್ತೆ ಟೇಕಾಫ್ ಆಗಿದೆ. ಬಾಕಿ ಉಳಿದ ಪ್ಯಾಚ್ ವರ್ಕ್ ಮುಗಿಸಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದವಾರ ನೆರವೇರಿತು. ಕಾಡಿನಲ್ಲಿ ವಾಸಿಸುವ ಅಲ್ಲಿನ ಜನರ ನಡೆ-ನುಡಿ, ರೀತಿ-ನೀತಿಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ನಾಯಕ ದುನಿಯ ವಿಜಯ್ ಅವರ ಜೊತೆ ಕೃತಿ ಕರಬಂಧ ಹಾಗೂ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಾಗಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸಂಜು ವೆಡ್ಸ್ ಗೀತಾ, ಮೈನಾದಂಥ ಸೂಪರ್ ಹಿಟ್ ಚಿತ್ರಗಳಿಗೆ ಅದ್ಭುತವಾಗಿ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ನೀಡಿದ್ದ ಸಂಗೀತ ನಿರ್ದೇಕ ಸಾಧು ಕೋಕಿಲಾ ಅವರು ಈಗ ಅದೇ ನಾಗಶೇಖರ್ ನಿರ್ದೆಶನದ ಮಾಸ್ತಿಗುಡಿ ಚಿತ್ರಕ್ಕೆ ಅತ್ಯುತ್ತಮವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ.

ಹಿಂದಿನ ಎರಡೂ ಚಿತ್ರಗಳಲ್ಲಿ ಬರೀ ಹಿನ್ನೆಲೆ ಸಂಗೀತಕ್ಕೆ ಮಾತ್ರ ಕೆಲಸ ಮಾಡಿದ್ದ ಅವರು ಈ ಚಿತ್ರದಲ್ಲಿ ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸಿದ್ದಾರೆ. ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದ ಮಾಹಾಶಿವರಾತ್ರಿ ಹಬ್ಬದಂದು ನೆರವೇರಿತು. ಕನ್ನಡ ಚಿತ್ರರಂಗದ ಹಿರಿಯಣ್ಣ ಹಾಗೂ ರೆಬೆಲ್‍ಸ್ಟಾರ್ ಅಂಬರೀಶ್ ಅವರು ಈ ಧ್ವನಿಮುದ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಕಣ್ಮರೆಯಾದ ಕಲಾವಿದರಾದ ಅನಿಲ್‍ಕುಮಾರ್ ಹಾಗೂ ಉದಯ್ ಅವರನ್ನು ಸಮಾರಂಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಸ್ಮರಿಸಿಕೊಂಡರು. ಅಲ್ಲದೆ ಟ್ರೈಲರ್ ಆರಂಭದಲ್ಲಿ ಅಗಲಿದ ಗೆಳೆಯರ ಬಗ್ಗೆ ನಟ ದುನಿಯಾ ವಿಜಯ್ ಅವರು ಆಡಿರುವಂಥ ಮಾತು ಎಂಥವರನ್ನಾದರೂ ಕರಗಿಸಿಬಿಡುತ್ತದೆ. ಇಡೀ ಚಿತ್ರದಲ್ಲಿ ಕಾಡು, ಕಾಡಿನ ಸಂಪತ್ತು, ಅಲ್ಲಿ ವಾಸಿಸುವ ಜನರ ಜೀವನದ ಬಗ್ಗೆ ಹೇಳುತ್ತ ಅದರ ಜೊತೆಗೆ ಒಂದು ಮಹತ್ತರವಾದ ಕಂಟೆಂಟನ್ನು ಕಟ್ಟಿಕೊಡಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.

ಇನ್ನು ಈ ಚಿತ್ರದ ಸಂಗೀತದ ಕುರಿತಂತೆ ಸಾಧು ಕೋಕಿಲಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ಚಿತ್ರದ ಸಂಗೀತವನ್ನು ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದ ಖಳನಟ ರಾದಅನಿಲ್ ಹಾಗೂ ಉದಯ್ಅ ವರಿಗೆ ಸಮರ್ಪಿಸಿದ್ದಾರೆ. ಈ ಚಿತ್ರದ ಸಂಗೀತ ಎರಡು ಕಾರಣಕ್ಕೆ ನನಗೆ ಬಹಳ ವಿಶೇಷವಾಗಿದೆ. ಮೊದಲ ಕಾರಣವೆಂದರೆ, ನಾವು ಯಾವಾಗಲೂ ಚಿತ್ರವೊಂದಕ್ಕೆ ಸಂಗೀತ ಸಂಯೋಜನೆ ಮಾಡುವಾಗ ಸಹಜವಾಗಿ ನಾಲ್ಕು ಗೋಡೆಗಳ ಮಧ್ಯೆ ಮಾಡುತ್ತಿರುತ್ತೇವೆ. ಆದರೆ, ಈ ಚಿತ್ರದ ನಿರ್ದೇಶಕರು ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಪೃಕೃತಿಯ ಮಡಿಲಿನಲ್ಲಿ ಕೂರಿಸಿ ಮ್ಯೂಸಿಕ್ ಕಂಪೋಜ್ ಮಾಡಲು ಪ್ರೇರೇಪಿಸಿದರು.

ಮತ್ತೊಂದು ಕಾರಣ ಎಂದರೆ ನನ್ನ ಮಗ ಸುರಾಗ್, ಈ ಚಿತ್ರಕ್ಕೆ ಸಂಗೀತ ಮಾಡುವಲ್ಲಿ ಸುರಾಗ್ ಸಂಪೂರ್ಣವಾಗಿ ತೊಡಗಿಕೊಂಡಿದ್ದ. ಸಂಗೀತ ನಿರ್ದೇಶನದ ಸಂದರ್ಭದಲ್ಲಿ ನನ್ನ ಮಗ ನನಗೆ ರೈಟ್-ಹ್ಯಾಂಡ್ ಆಗಿ ಕೆಲಸ ಮಾಡಿದ್ದಾನೆ ಎಂದು ಸಾಧುಕೋಕಿಲ ಅವರು ಹೇಳಿದ್ದಾರೆ.ಕಾಂಕ್ರೀಟ್ ಸಿಟಿಯಿಂದ ನನ್ನನ್ನು ಹೊರಗೆ ಕರೆತಂದು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನಿರ್ದೇಶಿಸಲು ಸಹಾಯ ಮಾಡಿದ ನಿರ್ದೇಶಕ ನಾಗಶೇಖರ್ ಅವರಿಗೆ ಈ ಮೂಲಕ ವಿಶೇಷ ಧನ್ಯವಾದಗಳನ್ನು ಹೇಳುತ್ತೇನೆ. ಚಿತ್ರದ ಐದೂ ಹಾಡುಗಳನ್ನು ಸಾಹಿತಿ ಕವಿರಾಜ್ ಅವರೇ ಬರೆದಿದ್ದಾರೆ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿವೆಯಂತೆ. ಈಗಾಗಲೇ ಚಿತ್ರ ಪೂರ್ಣವಾಗಿದ್ದು, ಬಿಡುಗಡೆ ಮಾಡಲು ಚಿತ್ರತಂಡ ಸನ್ನನಟದವಾಗುತ್ತಿದೆಯಂತೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin