ಮಹದಾಯಿಗಾಗಿ ಸಿಎಂ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಮುಕ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

All-Party-Meeting

ಬೆಂಗಳೂರು.ಅ.19 : ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಅ.21ರಂದು ಮುಂಬೈನಲ್ಲಿ 3 ರಾಜ್ಯಗಳ ಸಿಎಂ ಸಭೆ ನಡೆಯುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿಕೆ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಡಿವಿಎಸ್ ಮುಂತಾದವರು ಭಾಗವಹಿಸಿದ್ದರು.

ಸಭೆಯ ನಂತರ ಮಾದ್ಯಮಗಳಿಗೆ ವಿವರಗಳನ್ನು ನೀಡಿದ ಮುಖ್ಯಮಂತರಿ ಸಿದ್ದರಾಮಯ್ಯ, ಮಹಾದಾಯಿ ನ್ಯಾಯಾಧೀಕರಣವು ಮೂರೂ ರಾಜ್ಯಗಳ ಮುಖ್ಯಮಂತ್ರಿ ಗಳು ಕೂತು ಮಾತುಕತೆ ಮೂಲಕ ವಿವಾದ ಬಗೆ ಹರಿಸಿಕೊಳ್ಳುವ ಸಲಹೆ ನೀಡಿತ್ತು. 21 ರಂದು ಮುಂಬೈನಲ್ಲಿ ಬೆಳಗ್ಗೆ 12 ಗಂಟೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಕಗಳನ್ನು ಮಾತುಕತೆಗೆ ಕರೆದಿದ್ದಾರೆ.ಅದಕ್ಕೆ ಪೂರ್ವಭಾವಿಯಾಗಿ ಇವತ್ತಿನ ಸರ್ವಪಕ್ಷ ಸಭೆ ಕರೆಯಲಾಗಿತ್ತು ಮೊದಲಿನಿಂದಲೂ ನ್ಯಾಯಾಧೀಕರಣದ ಹೊರಗೆ ಇತ್ಯರ್ಥವಾಗಬೇಕು ಎಂಬುದು ನಮ್ಮ ನಿಲುವು.ಇವತ್ತು ಎಲ್ಲ ಪಕ್ಷಗಳವರು ಇದನ್ನು ಸ್ವಾಗತಿಸಿದ್ದಾರೆ. ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ.

ನಮ್ಮ ಅವಶ್ಯಕತೆಗೆ ಅನುಗುಣವಾಗಿ 36.55 ಟಿಎಂಸಿ ನೀರು ಬೇಕು ಎಂದು ನ್ಯಾಯಾಧೀಕರಣವನ್ನು ಕೋರಿದ್ದೇವೆ.ಮಹಾದಾಯಿ ಹುಟ್ಟುವುದೇ ಕರ್ನಾಟಕದಲ್ಲಿ.ಶೆ.75ರಷ್ಟು ನೀರು ಕರ್ನಾಟಕದಲ್ಲೇ ಲಭ್ಯವಾಗೋದು ಇದರಲ್ಲಿ ಯಾವುದೇ ಕಠಿಣ ಧೋರಣೆ ಬೇಡ.ಮಾತುಕತೆ ಸಂದರ್ಭದಲ್ಲಿ ಸ್ವಲ್ಪ ಕೊಡುಕೊಳ್ಳುವಿಕೆ ಇರಬೇಕು ಎಂದು ಸರ್ವ ಪಕ್ಷಗಳ ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ. .ನಾಳೆ ನಮ್ಮ ಕಾನೂನು ತಜ್ಞರು ಹಾಗೂ ತಾಂತ್ರಿಕ ತಜ್ಞರ ಜತೆ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.ಕುಡಿಯುವ ನೀರಿಗೆ ಪ್ರತ್ಯೇಕವಾಗಿ 7.5 ಟಿಎಂಸಿ ನೀರು ಕೇಳುವುದಿಲ್ಲ.ಒಟ್ಟು ನಮ್ಮ‌ಪಾಲಿನ ನೀರಿಗಾಗಿ ಹಕ್ಕು ಮಂಡಿಸುತ್ತೇವೆ ಎಂದರು.

ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಹಾದಾಯಿ ವಿಚಾರವಾಗಿ ಸಿಎಂ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದ್ದೇವೆ.   ಎಲ್ಲರ ಅಭಿಪ್ರಾಯ ಒಂದೇ ಆಗಿದೆ, ಸಮಸ್ಯೆ ಪರಿಹರಿಸಲು ಮಾಡಲು ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದೇವೆ. ಅಲ್ಲಿನ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಲು ಇಂದಿನ ಸಭೆಯಲ್ಲಿ ನಾವು ಪ್ರಸ್ತಾಪ ಮಾಡಿಲ್ಲ.  ಆದ್ರೆ ಈ ಹಿಂದೆಯೆ ನಾವು ಗೋವಾ ಹಾಗೂ ಮಾಹಾ ಸಿಎಂ ಜೊತೆ ಪಕ್ಷದ ವೇದಿಕೆಯಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಮೂರು ಸಿಎಂಗಳು ಸೌಹಾರ್ಧತೆಯಿಂದ  ಮಾತುಕತೆ ಮಾಡಿ ಸಮಸ್ಯೆ ಪರಿಹರಿಸಲು ಹೇಳಿದ್ದೇವೆ. ನಾವು ಸಂಸದರು ಹಾಗೂ ಎಲ್ಲ ಪಕ್ಷಗಳೂ ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಸಿಎಂಗೆ ಎಲ್ಲರೂ ಬೆಂಬಲ ಸೂಚಿಸಿದ್ದೇವೆ, ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin