ಮಹದಾಯಿ ತೀರ್ಪು : ಸಚಿವರು ಮತ್ತು ಕಾನೂನು ತಜ್ಞರುಗಳೊಂದಿಗೆ ಸಿಎಂ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

CM-Meetingಬೆಂಗಳೂರು, ಆ.3-  ಮಹದಾಯಿ ತೀರ್ಪು ಕುರಿತಂತೆ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪ್ರಮುಖ ಸಚಿವರು, ಕಾನೂನು ತಜ್ಞರುಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನೆ ನಡೆಸಿದರು. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಜನ ಆಕ್ರೋಶಿತರಾಗಿದ್ದು, ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ.ಮಹದಾಯಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆ..? ನ್ಯಾಯಾಕರಣದ ಮುಂದೆ ವಾದ ಮುಂದುವರಿಸಬೇಕೆ..? ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ತರಲು ಕ್ರಮ ಕೈಗೊಳ್ಳಬೇಕೆ ಎಂಬ ಹತ್ತು-ಹಲವು ವಿಷಯಗಳ ಕುರಿತಾಗಿ ಚರ್ಚೆ ನಡೆಸಿದರು.

ಮಹದಾಯಿ ಹೋರಾಟದಲ್ಲಿ ರೈತ ಚಳವಳಿಗಾರರು, ಸಾರ್ವಜನಿಕರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಕುರಿತು, ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಕುರಿತಂತೆ ಮಾಹಿತಿ ಸಂಗ್ರಹಿಸಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಪೊಲೀಸ್ ಅಕಾರಿಗಳೊಂದಿಗೆ ಚರ್ಚಿಸಿದರು. ಪುತ್ರನ ಅಕಾಲಿಕ ನಿಧನದಿಂದ ದುಃಖಿತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತ್ಯಸಂಸ್ಕಾರ ಮುಗಿದ ಎರಡು ದಿನಗಳಲ್ಲೇ ಮತ್ತೆ ಸಾರ್ವಜನಿಕ ಸೇವೆಗೆ ಮರಳಿದ್ದಾರೆ.

ಕಳೆದ ವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರು ಜಲಾವೃತವಾಗಿದ್ದು,  ಬಹಳಷ್ಟು ಪ್ರದೇಶಗಳ ಜನಜೀವನ ಅಸ್ತವ್ಯಸ್ತಗೊಂಡಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ವಾಸಿಸುವ ಮನೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ನಿವಾಸಿಗಳು ಬೀದಿಪಾಲಾಗುವ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪುತ್ರ ರಾಕೇಶ್‌ನ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡುವುದಕ್ಕಾಗಿ ಬ್ರೆಜಿಲ್‌ನಲ್ಲಿದ್ದರೂ ಅಲ್ಲಿಂದಲೇ ಅಕಾರಿಗಳಿಗೆ ಮತ್ತು ಜನಪ್ರತಿನಿಗಳಿಗೆ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದ್ದರು.  ಇಂದೂ ಕೂಡ ಈ ಸಮಸ್ಯೆಗೆ ಸಂಬಂಸಿದಂತೆ ಬಿಬಿಎಂಪಿ ಅಕಾರಿಗಳೊಂದಿಗೆ ಚರ್ಚೆ ನಡೆಸಿದರು.  ಪುತ್ರನ ಅಂತ್ಯಸಂಸ್ಕಾರದ ಬಳಿಕ ಕಳೆದ ಮೂರು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಏಕಾಂಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಃಖದಿಂದ ಹೊರಬರಲು ಕಷ್ಟಸಾಧ್ಯವಾದರೂ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದಾರೆ.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin