ಮಹದಾಯಿ ತೀರ್ಪು : ಸರ್ಕಾರ-ವಿಪಕ್ಷ ವಾಗ್ವಾದ, ಸಿಎಂ ಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

gSGHSSSS

ಬೆಂಗಳೂರು, ಆ.7-ಮಹದಾಯಿ ನ್ಯಾಯಮಂಡಳಿ ಮಧ್ಯಂತರ ತೀರ್ಪು ಕುರಿತಂತೆ ಇಂದು ವಿಧಾನಸಭೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟಿತು.   ಪ್ರಧಾನಿ ಮಧ್ಯಸ್ಥಿಕೆಗೆ ಸರ್ಕಾರ ಮುಂದಾಗಬೇಕೆಂದು ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್, ಈಶ್ವರಪ್ಪ  ಒತ್ತಾಯಿಸಿ ನಿಮ್ಮ ನಿರ್ಲಕ್ಷದಿಂದಲೇ ಇಂತಹ ಪರಿಸ್ಥಿತಿ ಉದ್ಭವವಾಗಿದೆ.   ಮೊದಲೆ ಗೋವಾದ ಕಾಂಗ್ರೆಸ್ ನಾಯಕರ ವಿಶ್ವಾಸ ಪಡೆದು ಅವರ ಮನವೊಲಿಸಿದ್ದರೆ  ಒಂದು ವೇದಿಕೆ ರೂಪಿಸಿ ಚರ್ಚೆ ಮಾಡಬಹುದಾಗಿತ್ತು. ಆದರೆ ನೀವು ಕಾನೂನು ಹೋರಾಟದ ಪ್ರತಿಷ್ಠೆಗೆ ಬಿದ್ದು ಜನರ ಭಾವನೆಗೆ ವಿರುದ್ದ ವಾಗಿ ನಡೆದುಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ತಿರುಗೇಟು ನೀಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಕಾನೂನು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಮತ್ತಿತರರು ನೀವು  ರಾಜಕೀಯ ಮಾಡುತ್ತೀದ್ದೀರಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಒಂದೇ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಆದರೆ ನಿಮಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ  ಇದರ ಬಗ್ಗೆ ಆಸಕ್ತಿ ಇಲ್ಲ. ರಾಜ್ಯ ಸರ್ಕಾರದ ಮೇಲೆ ವೃಥಾ ದೂರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.   ಕಾನೂನು ಹೋರಾಟ ಕುರಿತಂತೆ ಪ್ರತಿಪಕ್ಷದ ನಾಯಕರ ವಿಶ್ವಾಸವನ್ನು ಪಡೆದು  ಉತ್ತರ ಕರ್ನಾಟಕ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಲಾಯಿತು.   ಮಹದಾಯಿ ಹೋರಾಟದ ವೇಳೆ, ರೈತರು ಮತ್ತು ಅಮಾಯಕರ ಮೇಲೆ ನಡೆದ ಪೊಲೀಸರ  ಅಮಾನವೀಯ ಲಾಠಿ ಚಾರ್ಜ್ ಹಾಗೂ ದೌರ್ಜನ್ಯದ ವಿರುದ್ಧವೂ ಪ್ರತಿಪಕ್ಷದ ನಾಯಕರು, ಬಿಜೆಪಿ ಸಂಸದರು ಟೀಕಾಪ್ರಹಾರ ನಡೆಸಿದರು.

ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಎಲ್ಲರೂ ಒಗ್ಗಟ್ಟಾಗಿ  ನಮ್ಮ ಹಕ್ಕಿಗಾಗಿ ಹೋರಾಟ ನಡೆಸೋಣ ನ್ಯಾಯಯುತವಾಗಿ ನಮಗೆ ದಕ್ಕ ಬೇಕಾದ ನೀರನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ಪಡೋಣ ಎಂದು ಸಲಹೆ ನೀಡಿದರು.

Facebook Comments

Sri Raghav

Admin