ಮಹದಾಯಿ ಮೇಲೆ ಗೋವಾ ಕಣ್ಗಾವಲು
ಈ ಸುದ್ದಿಯನ್ನು ಶೇರ್ ಮಾಡಿ
ಪಣಜಿ,ಜ.26- ಕರ್ನಾಟಕ ಸರ್ಕಾರ, ಕಾನೂನು ಬಾಹಿರವಾಗಿ ಮಹದಾಯಿ ನದಿಪಾತ್ರದಲ್ಲಿ ನಿರ್ಮಾಣ ಚಟುವಟಿಕೆ ಕೈಗೊಂಡಿದೆ ಎಂದು ಇತ್ತೀಚೆಗಷ್ಟೇ ಆರೋಪ ಮಾಡಿದ್ದ ಗೋವಾ ಸರ್ಕಾರ, ಇಂಥ ಯಾವುದೇ ನಿರ್ಮಾಣ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲೆಂದೇ 4 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಗೋವಾ ಜಲಸಂಪನ್ಮೂಲ ಸಚಿವಾಲಯದ 4 ಇಂಜಿನಿಯರ್ ಗಳನ್ನು ಒಳಗೊಂಡ ಈ ಸಮಿತಿಯು, ಮಹದಾಯಿ ನದಿಪಾತ್ರದಲ್ಲಿ ಕರ್ನಾಟಕ ನಿರ್ಮಾಣ ಚಟುವಟಿಕೆ ನಡೆಯುತ್ತಿದೆಯೇ ಎಂಬುದನ್ನು ಗಮಿನಿಸಿ ಪ್ರತಿ 15 ದಿನಗಳಿಗೊಮ್ಮೆ ಗೋವಾ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದಕ್ಕೆಂದೇ ಸಮಿತಿ ವಾರಕ್ಕೆ ಎರಡು ಬಾರಿ ನದಿ ಪಾತ್ರದ ರಾಜ್ಯಗಳಿಗೆ ಭೇಟಿ ನೀಡುವಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸೂಚಿಸಿದ್ದಾರೆ.
Facebook Comments