ಮಹದಾಯಿ ವಿವಾದ : ಸಿಎಂ ಮಾತುಕತೆಗೆ ಮುಂದಾಗಲಿ – ಅಗ್ನಿ ಶ್ರೀಧರ್

ಈ ಸುದ್ದಿಯನ್ನು ಶೇರ್ ಮಾಡಿ

agni-sridhar

ಬೆಂಗಳೂರು, ಸೆ.3- ಮಹದಾಯಿ ವಿವಾದದ ತಾರ್ಕಿಕ ಅಂತ್ಯದವರೆಗೆ ಹೋರಾಟ ಕೈಗೊಂಡಿರುವ ಕರುನಾಡ ಸೇನೆ ಮುಖಂಡರು ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪಿನಂತೆ ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.  ಕರುನಾಡ ಸೇನೆ ರಾಜ್ಯಾಧ್ಯಕ್ಷ ಅಗ್ನಿ ಶ್ರೀಧರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಯವರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಪತ್ರ ಬರೆಯುವುದಕ್ಕಿಂತ ನೇರವಾಗಿ ಅವರೊಂದಿಗೆ ಈ ಸಮಸ್ಯೆ ಕುರಿತು ಚರ್ಚೆ ನಡೆಸುವುದು ಸೂಕ್ತ ಎಂದು ಹೇಳಿದರು.  ಕರುನಾಡ ಸೇನೆ ವತಿಯಿಂದ ಮಹದಾಯಿಗಾಗಿ ಪಾದಯಾತ್ರೆ ಕೈಗೊಂಡ ಗೋವಾ ಮುಖ್ಯಮಂತ್ರಿಯವರನ್ನು ನಾವು ಭೇಟಿ ಮಾಡಿದಾಗ ಅವರು ಬಹಳ ಸೌಜನ್ಯದಿಂದ ಮಾತುಕತೆ ನಡೆಸಿದರು.
ಕರ್ನಾಟಕ ನಮಗೆ ಹಿರಿಯಣ್ಣ ಇದ್ದಹಾಗೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ನಮಗೆ ತಿಳಿಸಿದ್ದಾರೆ. ನಾವು ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇವೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನ್ಯಾಯಾಕರಣದ ತೀರ್ಪು ಬಂದ ಮೇಲೆ ಮಾತುಕತೆಗೆ ಮುಂದಾಗುವುದು ಬಿಟ್ಟು ಮತ್ತೆ ಪತ್ರ ಬರೆಯುವುದಾಗಿ ಹೇಳುತ್ತಿರುವುದು ಸಮಂಜಸ ವಲ್ಲ ಎಂದು ತಿಳಿಸಿದರು.  ಇಂದೂಧರ್ ಹೊನ್ನಾಪುರ್, ಸಾಹಿತಿ ಚಂಪಾ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin