ಮಹದಾಯಿ ವಿಷಯಕ್ಕೂ ಹೆಚ್ಚು ಒತ್ತು ನೀಡಿ : ದತ್ತ
ಬೆಂಗಳೂರು,ಸೆ.23- ಕಾವೇರಿ ವಿಷಯವಾಗಿ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ನಡೆಸುತ್ತಿರುವ ವಿಶೇಷ ಅಧಿವೇಶನವನ್ನು ಮಹದಾಯಿ ವಿಚಾರವಾಗಿ ನಾಳೆಗೂ ಮುಂದು ವರೆಸುವ ನಿರ್ಣಯ ತೆಗೆದುಕೊಂಡರೆ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ಬರುತ್ತದೆ ಎಂದು ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲ-ಜಲ, ಭಾಷೆ ವಿಷಯ ವಾಗಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ತಮಿಳುನಾಡಿಗೆ ನೀರು ಬಿಡಬಾರದು ಎಂಬ ನಿರ್ಣಯ ಮತ್ತು ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ವಿಚಾರ ಸಂವಿಧಾನದ
ಪಾವಿತ್ರತೆಯನ್ನು ಪ್ರಶ್ನೆ ಮಾಡಿದಂತಾಗಿದೆ ಎಂದರು. ಜೆಡಿಎಸ್ ಸಹ ಸರ್ಕಾರದ ನಿರ್ಧಾರ ಗಳಿಗೆ ಸಂಪೂರ್ಣ ಬೆಂಬಲ ನೀಡಿದೆ. ಇಂದಿನ ಅಧಿವೇಶನದಿಂದಾಗಿ ನ್ಯಾಯಾಂಗ, ಶಾಸಕಾಂಗ ತನ್ನ ಪರಿಧಿಯಲ್ಲಿರಬೇಕು, ಸುಪ್ರೀಂಕೋರ್ಟ್ ಸಂವಿಧಾನದ ಪಾರಮ್ಯವನ್ನು ಉಲ್ಲಂ ಘಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಪಾತ್ರ ಮತ್ತು ಮಧ್ಯಸ್ಥಿಕೆ ಮುಖ್ಯವಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು ಹೇಳಿದರು.
► Follow us on – Facebook / Twitter / Google+