ಮಹದೇಶ್ವರ ಬೆಟ್ಟದಲ್ಲಿ ಎರಡೇ ದಿನದಲ್ಲಿ ನಾಲ್ಕು ಶವಗಳು ಪತ್ತೆ..! ಭಕ್ತರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Hamadeshwara-Betta

ಕೊಳ್ಳೇಗಾಲ, ಡಿ.24-ಪುರಾಣಪ್ರಸಿದ್ದ ಮಲೆ ಮಹದೇಶ್ವರಬೆಟ್ಟದಲ್ಲಿ ಕಳೆದ ಎರಡು ದಿನಗಳಿಂದೀಚೆಗೆ ನಾಲ್ಕು ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ. ಗುರುವಾರ ವ್ಯಕ್ತಿಯೊಬ್ಬ ಬೆಟ್ಟದ ಮರವೊಂದಕ್ಕೆ ನೇಣು ಬಿಗಿದುಕೊಂಡ ರೀತಿಯಲ್ಲಿ ಮೃತಪಟ್ಟಿದ್ದಾನೆ. ಆದರೆ ಇದು ಕೊಲೆಯಂತೆ ಭಾಸವಾಗುತಿದೆ. ನಿನ್ನೆ ಶಿವದರ್ಶಿನಿ ವಸತಿಗೃಹದಲ್ಲಿ ವ್ಯಕ್ತಿಯೊಬ್ಬ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ನಿನ್ನೆ ಬೆಟ್ಟದ ಬಸ್ ನಿಲ್ದಾಣದ ಬಳಿ ಶ್ರೀರಂಗಪಟ್ಟಣ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ 70 ವರ್ಷದ ಪುಟ್ಟಚಾರಿ ಎಂಬಾತನ ಶವ ಪತ್ತೆಯಾಗಿದ್ದು, ಸಂಜೆ ಪಾಲಾರ್ ಮಾರ್ಗ ಮಧ್ಯೆ ತಮಿಳುನಾಡು ಮೂಲದ ಚಿನ್ನಸ್ವಾಮಿ(70) ಎಂಬಾತನ ಶವ ಪತ್ತೆಯಾಗಿದೆ.

ಈ ನಾಲ್ಕು ದೇಹಗಳು ಅನುಮಾನಸ್ಪದ ರೀತಿಯಲ್ಲೇ ಪತ್ತೆಯಾಗಿದ್ದು, ದೇವಸ್ಥಾನದ ಪಾವಿತ್ರತೆಗೂ ಧಕ್ಕೆಯಾಗುತ್ತಿದೆ. ಅಲ್ಲದೆ ಧನುರ್ಮಾಸದ ಪ್ರಯುಕ್ತ ಬೆಟ್ಟಕ್ಕೆ ಭಕ್ತ ಮಹಾಸಾಗರವೇ ಹರಿದು ಬಂದಿದ್ದು, ಅವರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.  ಇದಕ್ಕೆ ಭದ್ರತಾ ವೈಫಲ್ಯವೋ ಅಥವಾ ದೇವಸ್ಥಾನದ ಆಡಳಿತ ಮಂಡಳಿಯ ವೈಫಲ್ಯವೋ ತಿಳಿಯದು. ಒಟ್ಟಾರೆ ಮಹದೇವನ ಈ ಬೆಟ್ಟದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಭಕ್ತರು ದೃತಿಗೆಟ್ಟಿದ್ದಾರೆ. ಕೂಡಲೇ ಭದ್ರತೆಯನ್ನು ಹೆಚ್ಚಿಸಬೇಕೆಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin