ಮಹಾದಾಯಿ, ಕಾವೇರಿ ನದಿ ನೀರಿಗಾಗಿ ಸೈಕಲ್ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

Kaveri-0002

ಇಳಕಲ್ಲ,ಅ.3- ಮಹಾದಾಯಿ ಮತ್ತು ಕಾವೇರಿ ನದಿ ನೀರಿಗಾಗಿ ಬಾಗಲಕೋಟ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವಿಧಾನಸೌಧದವರೆಗೆ ನಗರದ ಯುವಕರಾದ ಸಚಿನ ಸಾಲಿಮಠ ಹಾಗೂ ರಾಜಶೇಖರ ಹಿರೇಮಠ ಅವರು ನಿನ್ನೆ ಹಮ್ಮಿಕೊಂಡ ಸೈಕಲ್ ಜಾಥಾ ನಗರಕ್ಕೆ ಆಗಮಿಸಿದಾಗ ರೈತ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ತುಂಬದ ಮಾತನಾಡಿ ಕುಡಿಯುವದಕ್ಕಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಕರ್ನಾಟಕ ಜನತೆಗೆ ಕಾವೇರಿ ಹಾಗೂ ಮಹಾದಾಯಿ ನದಿ ನೀರನ್ನು ನಮಗೆ ಬೇಕು ಹಾಗೂ ಹುನಗುಂದ ತಾಲೂಕು ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಆಗಬೇಕು ಎಂಬ ಉದ್ದೇಶದಿಂದ ಈ ಇಬ್ಬರು ಸೈಕಲ್ ಜಾಥಾ

ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದರುಸಚಿನ ಹಾಗೂ ರಾಜಶೇಖರ ಮಾತನಾಡಿ, ಈ ಎರಡು ನದಿಗಳ ಮೇಲೆ ನಮ್ಮ ಹಿಡಿತವು ತಪ್ಪುತ್ತಿದೆ ಎನ್ನುವ ಭಾವನೆಯಿಂದ ನೆಲ, ಜಲ, ಭಾಷೆ ರಕ್ಷಣೆಗಾಗಿ ಈ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬೈಕ್ ಸಾಹಸಿ ಈರಣ್ಣ ಕುಂದರಗಿಮಠ, ಶಂಕರಪ್ಪ ಚಿನ್ನಾಪೂರ, ಗುರು ಗಾಣಿಗೇರ, ಮಹಾಲಿಂಗಪ್ಪ ಅವಾರಿ, ಶಿವು ನಂದಾರಪೂರಮಠ, ಪಿ.ಎಸ್. ಹಿರೇಮಠ, ವಿಜಯ ಚಿನ್ನಣ್ಣನವರ, ಮಹಾಂತಪ್ಪ ಹಾವರಗಿ, ನಿಂಗಪ್ಪ ಬಾರಿಗಿಡದ ಸೇರಿದಂತೆ ಅನೇಕ ಮಹಿಳೆಯರು ಇದ್ದರು. ನಂತರ ಸೈಕಲ್ ಜಾಥಾಕ್ಕೆ ದರ್ಗಾದ ಬಳಿ ಬಿಳ್ಕೋಡಲಾಯಿತು. ಈ ಸೈಕಲ್ ಜಾಥಾ ಕುಷ್ಟಗಿ, ಹೊಸಪೇಟಿ, ಚಿತ್ರದುರ್ಗ, ತುಮಕೂರ ಮಾರ್ಗವಾಗಿ ಬೆಂಗಳೂರ ತಲುಪಲಿದ್ದಾರೆ.

 

 

 

► Follow us on –  Facebook / Twitter  / Google+

Facebook Comments

Sri Raghav

Admin