ಮಹಾಮಸ್ತಕಾಭಿಷೇಕದಂದು ಮದ್ಯ-ಮಾಂಸ ನಿಷೇಧಿಸಿ

ಈ ಸುದ್ದಿಯನ್ನು ಶೇರ್ ಮಾಡಿ

maha-masta

ಶ್ರವಣಬೆಳಗೊಳ, ಅ.30-ಅಹಿಂಸೆ ಹಾಗೂ ತ್ಯಾಗವನ್ನು ಸಾರಿದ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಒತ್ತಾಯಿಸಿದರು. ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಶ್ರವಣಬೆಳಗೊಳದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜೈನ ಯುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಹಿಂಸಾ ಪರಮೋ ಧರ್ಮಎಂದು ಜಗತ್ತಿಗೆ ಸಾರಿದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಾದರೂ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದರು.

ಭಾರತ ಭೂಮಿ ಎಷ್ಟು ಪ್ರಾಚೀನವೋ ಜೈನ ಧರ್ಮಕೂಡ ಅಷ್ಟೇ ಪ್ರಾಚೀನವಾಗಿದೆ. ಜೈನ ಸಮಾಜದ ತತ್ವಗಳು ಎಂದಿಗೂ ಪ್ರಸ್ತುತವಾಗಿದ್ದು, ಜೈನ ಧರ್ಮದ ಮಹತ್ವನ್ನು ಎಲ್ಲ ಕಡೆ ತಿಳಿಸಬೇಕು. ವಿಶ್ವದಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಾಗಿದ್ದು ಅದನ್ನು ಕೊನೆಗಾಣಿಸಲು ಅಹಿಂಸಾ ಮಾರ್ಗವನ್ನು ಹಿಡಿಯಬೇಕು ಎಂದು ತಿಳಿಸಿದರು. ಕೊಲ್ಹಾಪುರ ಲೊಕಸಭಾ ಸದಸ್ಯ ರಾಜುಶೆಟ್ಟಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಇಂದು ಉಪವಾಸ ಮಾಡುವಂತಹ ಹಂತಕ್ಕೆ ತಲುಪಿದ್ದು, ಇತ್ತೀಚೆಗೆ ದೇಶದಲ್ಲಿ 9000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾದಿಸಿದರು. ರೈತನಿಗೆ ವಿಶ್ವಾಸ ತುಂಬುವಂತಹ ಕೆಲಸಗಳಾಗಬೇಕು, ರೈತನ ಹಕ್ಕನ್ನು ಯಾರೂ ಮೊಟಕುಗೊಳಿಸಬಾರದು ಎಂದರು.

Facebook Comments

Sri Raghav

Admin