ಮಹಾರಾಷ್ಟ್ರದಲ್ಲಿ ಅಕ್ರಮ ಗರ್ಭಪಾತ ಜಾಲ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Obortion--1

ಸಾಂಗ್ಲಿ, ಮಾ.6-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಕ್ರಮ ಗರ್ಭಪಾತದ ವ್ಯವಸ್ಥಿತ ಜಾಲವೊಂದು ಬೆಳಕಿಗೆ ಬಂದಿದೆ. 19 ಹೆಣ್ಣು ಭ್ರೂಣಗಳನ್ನು ಹರಣ ಮಾಡಿ ಅದನ್ನು ಕಾಲುವೆಯೊಂದರ ಬಳಿ ಎಸೆದಿರುವುದು ಪತ್ತೆಯಾಗಿದೆ. ಗರ್ಭಪಾತದ ವೇಳೆ ಗರ್ಭಿಣಿಯೊಬ್ಬಳ ಸಾವು ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಇದರ ಹಿಂದೆ ವ್ಯವಸ್ಥಿತ ಜಾಲವೊಂದರ ಕೈವಾಡ ಇರುವುದು ಪತ್ತೆಯಾಗಿದೆ.   ತನಿಖೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಗ್ರಾಮದ ಕಾಲುವೆ ಬಳಿ ಗುಂಡಿ ತೋಡಿ ಹೂಳಲಾಗಿದ್ದ ಹರಣಗೊಂಡ 19 ಹೆಣ್ಣು ಭ್ರೂಣಗಳು ಕಂಡುಬಂದವು. ಈ ಬಗ್ಗೆ ತನಿಖೆ ತೀವ್ರಗೊಂಡಿದ್ದು ಈ ಜಾಲದಲ್ಲಿ ಶಾಮೀಲಾದವರನ್ನು ಬಂಧಿಸಲಾಗುವುದು ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದತ್ತಾತ್ರೇಯ ಶಿಂಧೆ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin