ಮಹಾರಾಷ್ಟ್ರದಲ್ಲಿ ಭಾರೀ ಮಳೆ : ಉತ್ತರ ಕರ್ನಾಟಕದ ಹಲವು ಸೇತುವೆಗಳು ಮುಳುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

sdfghsadfhfsdhಚಿಕ್ಕೋಡಿ,ಆ.4-ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸೇತುವೆಗಳು ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.  ಹೊಲಗದ್ದೆಗಳು ಜಲಾವೃತಗೊಂಡಿವೆ. ಕಲ್ಲುಳ, ಯಡೂರ, ಗಾನವಾಡ, ದತ್ತವಾಡ ಸೇರಿದಂತೆ ಎಂಟು ಸೇತುವೆಗಳು ಮುಳುಗಡೆಯಾಗಿವೆ. ದೂದ್‍ಗಂಗಾ, ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಕೊಲ್ಲಾಪುರದ ರಾಧಾನಗರಿ ಡ್ಯಾಮ್‍ನಿಂದ 15 ಸಾವಿರ ಕ್ಯೂಸೆಕ್ಸ್ ನೀರನ್ನು ಐದು ಗೇಟ್‍ಗಳ ಮುಖಾಂತರ ಕೃಷ್ಣನದಿಗೆ ಹರಿಯಬಿಡಲಾಗಿದೆ. ಚಿಕ್ಕೋಡಿ, ಸದಲಗ ಸೇತುವೆಗಳ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರದ ಭಾರೀ ವರ್ಷಧಾರೆ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯ  ಸಂಪೂರ್ಣ ಭರ್ತಿಯಾಗಿದ್ದು 26 ಗೇಟ್‍ಗಳನ್ನು ಹೊರ ತೆಗೆದು ನಾರಾಯಣಪುರ ಡ್ಯಾಮ್‍ಗೆ ನೀರು ಬಿಡಲಾಗಿದೆ.

ಈ ಜಲಾಶಯಕ್ಕೆ 58 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು , 5800 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಹಲವೆಡೆ ಜಲಾವೃತ ಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದಂತ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಯೋಮಯವಾಗಿತ್ತು.  ಈ ಭಾರಿಯೂ ಕೂಡ ಮಹಾರಾಷ್ಟ್ರದಲ್ಲಿನ ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಹಲವೆಡೆ ಅತಿವೃಷ್ಟಿ ಪರಿಣಾಮ ಉಂಟಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin