ಮಹಾರಾಷ್ಟ್ರದಲ್ಲಿ ಮಳೆ : ಮನೆ, ಮಠ ಕಳೆದುಕೊಂಡ ಚಿಕ್ಕೋಡಿ ತಾಲೂಕಿನ ಜನ

ಈ ಸುದ್ದಿಯನ್ನು ಶೇರ್ ಮಾಡಿ

sdgsgfg

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಲವಾರು ಗ್ರಾಮಗಳು ಜಲಾವೃತವಾಗಿದ್ದು, ಸುಮಾರು 15ಕ್ಕೂ ಹೆಚ್ಚು ಸೇತುವೆಗಳು ಮುಳುಗಿ ಮನೆ-ಮಠ ಕಳೆದುಕೊಂಡ ಗ್ರಾಮಸ್ಥರು ಜಾನುವಾರು ಹಾಗೂ ಆಹಾರ ಸಾಮಾಗ್ರಿಗಳನ್ನು ಬೇರೆಡೆ ಸ್ಥಳಾಂತರಿಸಲು ಹರಸಾಹಸ ಪಡುತ್ತಿದ್ದಾರೆ.     ಚಿಕ್ಕೋಡಿಯಲ್ಲಿ 10, ರಾಯಬಾಗದಲ್ಲಿ 4 ಹಾಗೂ ಅಥಣಿಯಲ್ಲಿ 1  ಸೇತುವೆ ಸಂಪೂರ್ಣ ಜಲಾವೃತವಾಗಿದ್ದು ರಸ್ತೆ ಸಂಪೂರ್ಣ ಕಡಿದು ಹೋಗಿದೆ.    ಯಕ್ತಂಬಾ ಪಟ್ಟಣದಲ್ಲಿ ಮಳೆಯಿಂದ ಲಕ್ಷಾಂತರ ರೂ ಮೌಲ್ಯದ ಶೇಂಗಾ ಬೆಳೆ ನಾಶವಾಗಿದ್ದು, ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮುಲ್ಲಾ ನಖಿ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳೆಲ್ಲವೂ ಕೊಚ್ಚಿ ಹೋಗಿವೆ. ಈಡೀ ಗ್ರಾಮವೇ ನಡುಗಡ್ಡಿಯಂತಾಗಿದೆ.

ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ ಲಕ್ಷಾಂತ ರೂ ಮೌಲ್ಯದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.  ದೂದ್‍ಗಂಗಾ ನದಿ ಅಪಾಯದ ಮಟ್ಟ ಮೀರಿದ್ದು ಸುತ್ತ-ಮುತ್ತಲ ಗ್ರಾಮಗಳ ಜನರಿಗೆ  ಬೇರೆಡೆಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ನೀರಿನ ರಭಸ ಹೆಚ್ಚಾಗಿರುವ ಹಿನ್ನಲೆಯಲ್ಲಿ  ತೆಪ್ಪ ಹಾಗೂ ದೋಣಿಗಳಲ್ಲಿ ಪ್ರಯಾಣಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.  ಸತತ ಬೀಳುತ್ತಿರುವ ಮಳೆಯಿಂದ ಇನ್ನೂ ಹೆಚ್ಚಿನ  ಅನಾಹುತಗಳಾಗುವ ಸಾಧ್ಯತೆಯಿದ್ದು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ.    ಪ್ರವಾಹದಿಂದ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ತೋಟದ ವಸತಿ ಪ್ರದೇಶ ತೊರೆದಿದ್ದಾರೆ. ಸತತ ಮಳೆ ಬೀಳುತ್ತಿದ್ದು, ಮಳೆ ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಸಾಂಕ್ರಾಮಿಕ ರೋಗಗಳ ಭೀತಿಯೂ ಜಾಸ್ತಿಯಾಗಿದೆ.     ಗ್ರಾಮಸ್ಥರು ಕೊರೆಯುವ ಚಳಿಯಲ್ಲಿಯೇ ರಾತ್ರಿಯಿಡಿ ಕಾಲ ಕಳೆದರು. ರಾಯಭಾಗ ತಾಲೂಕಿನ ಹಲವಾರು ಗ್ರಾಮಗಳಲ್ಲೂ ಅಪಾರ ಪ್ರಮಾಣದ ಹಾನಿಯಾಗಿದ್ದು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

 

Facebook Comments

Sri Raghav

Admin