ಮಹಾರಾಷ್ಟ್ರದ ಕೆಲವೆಡೆ ಭೂಕಂಪ, ಉತ್ತರ ಕರ್ನಾಟಕದಲ್ಲೂ ನಡುಗಿದ ಭೂಮಿ
ಕೊಲ್ಲಾಪುರ, ಜೂ.4-ದಕ್ಷಿಣ ಮಹಾರಾಷ್ಟ್ರದ ಕೆಲವೆಡೆ ನಿನ್ನೆ ತಡರಾತ್ರಿ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಸತಾರ ಜಿಲ್ಲೆಯ ಕೊಯ್ನಾ ಪ್ರಾಂತ್ಯದಲ್ಲಿ ರಾತ್ರಿ 11.45ರಲ್ಲಿ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪವಾಗಿದೆ. ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ವರದಿಯಾಗಿಲ್ಲ.
ಸಾಂಗ್ಲಿ ಮತ್ತು ಕೊಲ್ಲಾಪುರ್ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿ ನಾಗರಿಕರು ಆತಂಕಗೊಂಡರು. ಭೂಮಿಯ 10 ಕಿ.ಮೀ. ಅಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪ ಕೇಂದ್ರ ಬಿಂದುವಿನಿಂದ 120 ಕಿ.ಮೀ. ವ್ಯಾಪ್ತಿಯಲ್ಲಿ ಭೂನಡುಕದ ಅನುಭವವಾಗಿದೆ ಎಂದು ಕೊಯ್ನಾ ಆಣೆಕಟ್ಟು ಭೂಕಂಪಕ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಕೊಯ್ನಾ ಪ್ರಾಂತ್ಯವನ್ನು ಸಕ್ರಿಯ ಭೂಕಂಪ ವಲಯ ಎಂದು ಪರಿಗಣಿಸಲಾಗಿದೆ. ಮೇ 20ರಂದು ಸತಾರ ಜಿಲ್ಲೆಯ ಕೊಯ್ನಾ ಮತ್ತು ಪಠಾಣ್ ತಾಲ್ಲೂಕುಗಳಲ್ಲಿ ಲಘು ಭೂಕಂಪ ಸಂಭವಿಸಿತ್ತು. ಇದೇ ವೇಳೆ ನಿನ್ನೆ ರಾತ್ರಿ ಮುಂಬೈ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವೆಡೆಗಳಲ್ಲೂ ಭೂಮಿ ನಡುಗಿದ್ದು, ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಜನ ಆತಂಕದಿಂದ ಮನೆ ಬಿಟ್ಟು ಹೊರಗೆ ಬಂದಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS