ಮಹಾರಾಷ್ಟ್ರದ ಬಿಜೆಪಿ ಸಚಿವ ಸುಭಾಷ್ ದೇಶ್‍ಮುಖ್ ಕಾರಲ್ಲಿತ್ತು 92 ಲಕ್ಷ ರೂ. ನಗದು..!

ಈ ಸುದ್ದಿಯನ್ನು ಶೇರ್ ಮಾಡಿ

Subhash-Deshmukh

ಮುಂಬೈ, ನ.18-ಪ್ರಧಾನಿ ನರೇಂದ್ರ ಮೋದಿ ಕಾಳಧನದ ವಿರುದ್ಧ ಸಮರ ಸಾರಿದ ಒಂದು ವಾರದಲ್ಲೇ ಹಿರಿಯ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಸಹಕಾರ ಸಚಿವ ಸುಭಾಷ್ ದೇಶ್‍ಮುಖ್ ಅವರಿಗೆ ಸೇರಿದ ಖಾಸಗಿ ವಾಹನದಲ್ಲಿ 92 ಲಕ್ಷ ರೂ.ಗಳು ಪತ್ತೆಯಾಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.  ಸಚಿವರ ಒಡೆತನದಲ್ಲಿರುವ ಸೋಲಾಪುರ ಮೂಲದ ಲೋಕ್‍ಮಂಗಲ್ ಗ್ರೂಪ್‍ಗೆ ಸೇರಿದ ವಾಹನದಲ್ಲಿ 91.5 ಲಕ್ಷ ರೂ.ಗಳ ನಗದನ್ನು ಒಸ್ಮಾನಾಬಾದ್ ಜಿಲ್ಲೆಯ ಉಮರ್‍ಗಾ ತಹಸೀಲ್‍ನಲ್ಲಿ ವಿಶೇಷ ತಪಾಸಣಾ ದಳ ವಶಪಡಿಸಿಕೊಂಡಿದೆ. ಒಸ್ಮಾನಾಬಾದ್ ಕಲೆಕ್ಟರ್ ನಾರ್ನವರೆ ಈ ಜಪ್ತಿಯನ್ನು ಖಚಿತಪಡಿಸಿದ್ದಾರೆ.

ಮುನ್ಸಿಪಲ್ ಚುನಾವಣೆಗಳ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಣೆ ಮೇಲೆ ನಿಗಾ ಇಟ್ಟಿರುವ ವಿಶೇಷ ದಳವು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾಗ ಲೋಕ್‍ಮಂಗಲ್ ಗ್ರೂಪ್‍ಗೆ ಸೇರಿದ ಕಾರಿನಲ್ಲಿ ಈ ಹಣ ಪತ್ತೆಯಾಗಿದೆ. ಸಂಸ್ಥೆಯ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಬಟವಾಡೆ ಮಾಡಲು ಹಣವನ್ನು ಕೊಂಡೊಯ್ಯಲಾಗುತ್ತಿದೆ ಎಂದು ಚಾಲಕ ಹೇಳಿಕೆ ನೀಡಿದನಾದರೂ ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಪತ್ರಗಳು ಪತ್ತೆಯಾಗಿಲ್ಲ. ಮಾಲು ಸಮೇತ ಚಾಲಕನನ್ನು ವಶಕ್ಕೆ ತೆಗೆದುಕೊಂಡಿರುವ ಸಿಬ್ಬಂದಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin