ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯನಿಷೇಧ ಕಾಯ್ದೆ ಜಾರಿಗೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Magic-a

ಬೆಂಗಳೂರು, ಸೆ.21- ಭಾರೀ ಕೋಲಾಹಲಕ್ಕೆ ದಾರಿ ಮಾಡಿಕೊಟ್ಟಿದ್ದ ಜ್ಯೋತಿಷ್ಯ ಹಾಗೂ ವಾಸ್ತುವನ್ನು ಕೈ ಬಿಟ್ಟು ಉಳಿದಂತೆ ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯನಿಷೇಧ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಜ್ಯೋತಿಷ್ಯ ಹಾಗೂ ವಾಸ್ತುವಿನಂತಹ ವಿಷಯಗಳ ನಿಷೇಧದ ವಿರುದ್ಧ ಪ್ರಬಲವಾಗಿ ಕೇಳಿ ಬಂದ ಕೂಗನ್ನು ಪರಿಗಣಿಸಿದ ಸರ್ಕಾರ ಈ ಎರಡೂ ವಿಷಯಗಳನ್ನು ಕೈ ಬಿಟ್ಟು ಮೌಢ್ಯ ನಿಷೇಧ(ತಿದ್ದುಪಡಿ)ಕಾಯ್ದೆಯನ್ನು ಜಾರಿಗೆ ತರಲು ಸಜ್ಜಾಗಿದೆ.

ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ವಿಧೇಯಕದ ಕುರಿತು ಚರ್ಚೆ ನಡೆಯಲಿದ್ದು ಸುಧೀರ್ಘ ಚರ್ಚೆಗೆ ಒಳಪಡಲಿದೆ. ಉನ್ನತ ಮೂಲಗಳು ಈ ಕುರಿತು ಮಾಹಿತಿ ನೀಡಿದ್ದು, ಜ್ಯೋತಿಷ್ಯ, ವಾಸ್ತು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಜನಸಾಮಾನ್ಯರನ್ನು ಶೋಷಿಸಲಾಗುತ್ತಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು. ದಿನ ಬೆಳಗಾದರೆ ಟಿವಿಗಳಲ್ಲಿ,ಮಾಧ್ಯಮಗಳಲ್ಲಿ ಜ್ಯೋತಿಷ್ಯ, ವಾಸ್ತುವಿನಂತಹ ವಿಷಯಗಳ ವೈಭವೀಕರಣವಾಗುತ್ತಿದ್ದು ಇದರಿಂದ ಇದರ ಹೆಸರಿನಲ್ಲಿ ಜನರನ್ನು ಶೋಷಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು.

ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
https://goo.gl/ha3nDc

#Yesteryear #Actress #Shakila #PassesAway

Posted by CiniSuddi on Thursday, September 21, 2017

ಈ ಹಿನ್ನೆಲೆಯಲ್ಲಿಯೇ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಸಜ್ಜುಗೊಳಿಸಿದಾಗ ಇಡೀ ಕಾಯ್ದೆಯ ವಿರುದ್ಧ ವ್ಯವಸ್ಥಿತವಾದ ಪ್ರಚಾರ ಕಾರ್ಯ ಆರಂಭವಾಗಿತ್ತು. ಮೌಢ್ಯ ನಿಷೇಧ(ತಿದ್ದುಪಡಿ)ಕಾಯ್ದೆ ಜಾರಿಗೆ ಬಂದರೆ ದೇವಸ್ಥಾನಗಳಿಗೆ ಹೋಗುವುದೂ ಮೌಢ್ಯವಾಗುತ್ತದೆ ಎಂದು ಸರ್ಕಾರ ತೀರ್ಮಾನಕ್ಕೆ ಬರುತ್ತದೆ ಎಂಬುದರಿಂದ ಹಿಡಿದು ಹಲವು ರೀತಿಗಳಲ್ಲಿ ಟೀಕೆಗಳು ವ್ಯಕ್ತವಾದವು. ಅಷ್ಟೇ ಅಲ್ಲ,ಆ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಲ್ಲೇ ಭಿನ್ನಾಭಿಪ್ರಾಯಗಳು ಮೊಳೆತಿದ್ದವಲ್ಲದೆ ಪ್ರಮುಖ ಸಚಿವರನೇಕರು, ಈಗಿನಂತೆ ಕಾಯ್ದೆ ಜಾರಿಗೆ ತರುವುದು ಸೂಕ್ತವಲ್ಲ ಎಂದು ಸಂಪುಟ ಸಭೆಯಲ್ಲೇ ಹೇಳಿದ್ದರು. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಕೂಡಾ ಕಾಯ್ದೆಯಲ್ಲಿನ ಕೆಲವು ಅಂಶಗಳ ಕುರಿತು ವಿರೋಧ ವ್ಯಕ್ತಪಡಿಸಿ, ನಮ್ಮ ಕಡೆ ಜಾತ್ರೆಗಳಲ್ಲಿ ಕುರಿಬಲಿಯಂತಹ ಆಚರಣೆಗಳು ಜಾರಿಯಲ್ಲಿವೆ. ಒಂದು ವೇಳೆ ಕುರಿಬಲಿಯನ್ನು ನಿಷೇಧಿಸಿದರೆ ನಾವು ಚುನಾವಣೆಗೆ ಹೋಗುವುದು ಕಷ್ಟವಾಗುತ್ತದೆ ಎಂದು ಒತ್ತಡ ಹೇರಿದ್ದರು.

ಹೀಗೆ ಜ್ಯೋತಿಷ್ಯ, ವಾಸ್ತು, ಕುರಿಬಲಿಯಂತಹ ಹಲವು ವಿಷಯಗಳ ಕುರಿತು ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ತಜ್ಞರಿಗೆ ಕರಡು ಸಿದ್ಧಪಡಿಸಲು ಹೇಳಿದ ಸರ್ಕಾರ ಅವರಿಂದ ಕರಡು ಸಜ್ಜಾಗಿ ಬಂದ ನಂತರ ಅದನ್ನು ಮುಂದಿಟ್ಟುಕೊಂಡು, ಸಚಿವರು, ಶಾಸಕರು ಮತ್ತಿತರರ ಅಭಿಪ್ರಾಯ ಪಡೆದು ಮಹಾರಾಷ್ಟ್ರದ ಮಾದರಿಯಲ್ಲಿ ಮೌಢ್ಯ ನಿಷೇಧ(ತಿದ್ದುಪಡಿ)ಕಾಯ್ದೆಗೆ ಅಂತಿಮ ರೂಪ ನೀಡಿದೆ. ಅಂತಿಮ ರೂಪ ಪಡೆದ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆಯಲ್ಲಿ ಜನಸಾಮಾನ್ಯರನ್ನು ಶೋಷಿಸಲು ಬಳಕೆಯಾಗುತ್ತಿದೆ ಎಂದು ಹೇಳಲಾಗಿದ್ದ ಜ್ಯೋತಿಷ್ಯ, ವಾಸ್ತುವಿನಂತಹ ಪ್ರಮುಖ ಅಂಶಗಳನ್ನು ಕೈ ಬಿಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾದ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗ ಬರಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Facebook Comments

Sri Raghav

Admin