ಮಹಾರಾಷ್ಟ್ರ ವೈದ್ಯರ ಮುಷ್ಕರ ಅಂತ್ಯ, ಕರ್ತವ್ಯಕ್ಕೆ ಹಾಜರು

ಈ ಸುದ್ದಿಯನ್ನು ಶೇರ್ ಮಾಡಿ

Doctors--01

ಮುಂಬೈ, ಮಾ.25-ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೀಡಿದ ಭರವಸೆ ಹಾಗೂ ಬಾಂಬೆ ಹೈಕೋರ್ಟ್ ಮಧ್ಯಸ್ಥಿಕೆಯಿಂದಾಗಿ ಮಹಾರಾಷ್ಟ್ರದ ಸರ್ಕಾರಿ ಅಸ್ಪತ್ತೆಗಳ ಸ್ಥಾನಿಕ ವೈದ್ಯರು ಮುಷ್ಕರ ಅಂತ್ಯಗೊಳಿಸಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ನಿನ್ನೆ ರಾತ್ರಿ ನಡೆದ ಮಾತುಕತೆ ಫಲಪ್ರದವಾಗಿದ್ದು, ಮುಷ್ಕರ ಅಂತ್ಯಗೊಳಿಸುವುದಾಗಿ ಮಹಾರಾಷ್ಟ್ರ ಅಸೋಷಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಸಂಘಟನೆಯು ಹೇಳಿಕೆ ನೀಡಿದೆ.
ಮಹಾರಾಷ್ಟ್ರದಲ್ಲಿ ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಸರಣಿ ಹಲ್ಲೆ ಮತ್ತು ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿ ಮಹಾರಾಷ್ಟ್ರದ 4,500ಕ್ಕೂ ಹೆಚ್ಚು ವೈದ್ಯರು ಕಳೆದ ನಾಲ್ಕು ದಿನಗಳಿಂದ ಸಾಮೂಹಿಕ ರಜೆ ಹಾಕಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಮಹಾರಾಷ್ಟ್ರ ವೈದ್ಯರಿಗೆ ಬೆಂಬಲ ಸೂಚಿಸಿ ದೆಹಲಿಯ 20,000ಕ್ಕೂ ಹೆಚ್ಚು ಸ್ಥಾನಿಕ ವೈದ್ಯರ ಸಾಮೂಹಿಕ ರಜೆಯಿಂದಾಗಿ ಸರ್ಕಾರಿ ಮತ್ತು ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ 800ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳು ಮುಂದೂಡಲಾಗಿತ್ತು. ಅಲ್ಲದೇ ನೂರಾರು ಹೊರರೋಗಿಗಳಿಗೆ ಚಿಕಿತ್ಸೆ ಇಲ್ಲದೇ ನರಳುವಂತಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin