ಮಹಾಲಕ್ಷ್ಮೀ ಸೊಸಾಯಿಟಿಗೆ ರೂ 1.05 ಕೋಟಿ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

belagam-11

ಮೂಡಲಗಿ,ಸೆ.27- ಸೊಸಾಯಿಟಿಯು ಈಗಾಗಲೇ ಏಳು ಶಾಖೆಗಳನ್ನು ಪ್ರಾರಂಭಿಸಿ ಪ್ರಗತಿಯಲ್ಲಿದ್ದು ಬೆಳ್ಳಿ ಮಹೋತ್ಸವದ ಸಮಯಕ್ಕೆ ನೂತನವಾಗಿ ಮೂರು ಹೊಸ ಶಾಖೆ ತೆರೆಯುವ ಗುರಿ ಹೊಂದಿದಲಾಗಿದೆ ಎಂದು ಸೊಸೈಟಿಯ ಉಪಾಧ್ಯಕ್ಷ ಮಲ್ಲಪ್ಪ ಗು. ಗಾಣಿಗೇರ ಹೇಳಿದರು.
ಅವರು ಸ್ಥಳೀಯ ಮಹಾಲಕ್ಷ್ಮಿ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ವರ್ಷದ ಅಂತ್ಯಕ್ಕೆ 36.63 ಕೋಟಿ ದುಡಿಯುವ ಬಂಡವಾಳ ಹೊಂದಿದ ಸಂಸ್ಥೆಯು ಆಡಳಿತ ಮಂಡಳಿ, ಶೇರುದಾರ ಮತ್ತು ಸಿಬ್ಬಂದಿಗಳ ಸಹಕಾದಿಂದ ಪ್ರಸಕ್ತ ಸಾಲಿನಲ್ಲಿ ರೂ 1.05 ಕೋಟಿ ಲಾಭ ಗಳಿಸಲ್ಲಾಗಿದೆ ಎಂದರು.

 

ತಿಗಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ರಮೇಶ ಆಳಗುಂಡಿ ಮಾತನಾಡಿ, ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕೆಂದರೆ ಒಗ್ಗಟ್ಟು ಮತ್ತು ನನ್ನದು ಎನ್ನುವುದಕ್ಕಿಂತ ನಮ್ಮದು ಎನ್ನುವ ಮನೋಭಾವ ನಮ್ಮಲ್ಲಿಬೇಕು, ಮುಂದಿನ ಪೀಳಿಗೆ ಚೆನ್ನಾಗಿರಲಿ ಎಂಬ ಸಹೋದರತ್ವ ಭಾವನೆ ಮೂಡಿದಲ್ಲಿ ನಾವೆಲ್ಲರೂ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ, ದೇಶಕ್ಕೆ ಕೃಷಿಕ, ಸೈನಿಕ, ಶಿಕ್ಷಕ ಇವರು ದೇಶದ ಆಧಾರ ಸ್ಥಂಬಗಳು ಹಾಗೇಯೇ ಹಣಕಾಸು ಸಂಸ್ಥೆಗೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಆಧಾರ ಸ್ತಂಭ ಎಂದರು.

 

ಮುನವಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ ಶಿಕ್ಷಕ ಎಚ್.ಬಿ. ಅಸೂಟಿ ಮಾತನಾಡಿ, ಸಹಕಾರ ಎಂದರೆ ಅಬಲರನ್ನು ಸಬಲರನ್ನಾಗಿಸುವುದು, ಹಣವನ್ನು ನೀರಿನಂತೆ ಗಳಿಸಿ ತೀರ್ಥದಂತೆ ಬಳಸಿ, ರಚನಾತ್ಮಕ ಸಂಘಟನ ಶಕ್ತಿ ಹಾಗೂ ಉತ್ತಮ ಕಾರ್ಯದಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಈ ಕ್ಷೇತ್ರವೂ ಬೆಳೆದರೆ ಮಾತ್ರ ರೈತರು ಮುಂದುವರೆಯುತ್ತಾರೆ. ಸಹಕಾರ ಸಂಘಗಳು ಗ್ರಾಹಕರ ವಿಶ್ವಾಸಗಳಿಸುವ ಮೂಲಕ ಗ್ರಾಮೀಣ ಭಾಗದ ಜನತೆಗೆ ಉಪಯುಕ್ತವಾಗಬೇಕೆಂದರು.
ಸಾನಿಧ್ಯ ವಹಿಸಿದ ಶ್ರೀ ಶ್ರೀಪಾದಬೋದ ಸ್ವಾಮಿಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಕಾಶ ನಿಡಗುಂದಿ, ಎಸ್.ಜಿ. ಪುಟ್ಟಿ, ಗೋವಿಂದ ಹನುಮಂತ ದೇಸಾಯಿ ಅವರು ವರದಿವಾಚನ, ಲಾಭ-ಹಾನಿ, ಲಾಭ ವಿಭಾಗ, ಆಡಾವೆ ಪತ್ರಿಕೆ ಮಂಡಿಸಿದರು.
ಇದೇ ವೇಳೆಯಲ್ಲಿ ಇಲ್ಲಿಯ ಕೆ.ಇ.ಬಿಯ ಅಭಿಯಂತರ ಸುರೇಶ ಮುರಗೋಡ ಅವರು ಬಡ್ತಿ ಹೊಂದಿ ಬೆಳಗಾವಿಗೆ ವರ್ಗವಾಣೆಗೊಂಡ ಪ್ರಯುಕ್ತ ಸೋಸೈಟಿಯಿಂದ ಸತ್ಕರಿಸಿದರು.
ಸಂಸ್ಥೆಯ ಅಧ್ಯಕ್ಷ ಮುತ್ತಪ್ಪ ಈರಪ್ಪನ್ನವರ, ಬಸಪ್ಪ ಡೋಣಿ, ಭೀಮನಗೌಡ ಪಾಟೀಲ, ಶಂಕರಗೌಡ ಪಾಟೀಲ, ಗೋಪಾಲಕೃಷ್ಣ ಪತ್ತೆಪೂರ, ಮಹಾದೇವ ಸತ್ತಿಗೇರಿ, ಎಮ್. ಎಮ್. ಅಣಸಿ, ಸಿದ್ದು ಪೂಜರಿ, ಪ್ರ.ಕಛೇರಿ ನಿರ್ದೇಶಕರಾದ ಪರಪ್ಪ ಮುನ್ಯಾಳ, ಶಂಕರ ಮುರಗೋಡ, ಶಿವಬಸು ಖಾನಟ್ಟಿ, ಚನ್ನಪ್ಪ ಗೋಕಾಕ, ಸಂತೋಷ ಪಾರ್ಶಿ, ಸಾವಂಕ್ಕಾ ಶೆಕ್ಕಿ, ಭಾರತಿ ಪಾಟೀಲ, ಶೋಭಾ ಕದಮ್, ಹಾಗೂ ವಿವಿಧ ಶಾಖೆಗಳ ಸಲಹಾ ಸಮೀತಿ ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ಸಿ.ಎಸ್. ಬಗನಾಳ ಸ್ವಾಗತಿಸಿದರು. ಎ.ಎಸ್. ಗಾಣಿಗೇರ ನಿರೂಪಿಸಿದರು. ವಿಜಯ ನಿಡಗುಂದಿ ವಂದಿಸಿದರು

 

► Follow us on –  Facebook / Twitter  / Google+

Facebook Comments

Sri Raghav

Admin