ಮಹಿಳಾ ಘಟಕದ ಅಧ್ಯಕ್ಷರಾಗಿ ಸವಿತಾ

ಈ ಸುದ್ದಿಯನ್ನು ಶೇರ್ ಮಾಡಿ

savita

ಚಿಕ್ಕಮಗಳೂರು, ಆ.16- ಕಡೂರು ತಾಲ್ಲೂಕು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಸವಿತಾ ಸತ್ಯನಾರಾಯಣ ಅವರನ್ನು ನೇಮಕ ಮಾಡಲಾಗಿದೆ ಎಂಬುದಾಗಿ ಜಿಲ್ಲಾ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಕಾರ್ಯಕರ್ತರೂ ಕಡೂರು ತಾಲ್ಲೂಕಿನಲ್ಲಿ ವಿವಿಧ ಸಂಸ್ಥೆಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ನಿರಂತರವಾಗಿ 20 ವರ್ಷಗಳಿಂದ ಕನ್ನಡ ನುಡಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿರಿಗನ್ನಡ ವೇದಿಕೆಯು ಕಲೆ, ಸಾಹಿತ್ಯ, ಜಾನಪದ, ನಾಟಕ, ನಾಡು, ನುಡಿ ಹಾಗೂ ಸಂಸ್ಕೃತಿ ಒಳಗೊಂಡಂತೆ ತಾಲ್ಲೂಕಿನಾದ್ಯಂತ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಎಂದರು.ಕವಿ, ಸಾಹಿತಿಗಳ, ಕೃತಿಗಳ ಪ್ರಕಟಣೆ, ಸಾಧನೆಗಳು, ವಿಮರ್ಶೆ ಸೇರಿದಂತೆ ನಾನಾ ಪ್ರಕಾರದ ಸಾಹಿತ್ಯ ಜನಸಾಮಾನ್ಯರಿಗೆ ಪರಿಚಯಿಸುವ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯ ಕವಿ, ಸಾಹಿತಿಗಳನ್ನು ಉತ್ತೇಜಿಸುವ ಚಟುವಟಿಕೆಗಳನ್ನು ರೂಪಿಸುವುದು ಸಿರಿಗನ್ನಡ ವೇದಿಕೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.ಸಾಹಿತ್ಯ ಸಂಸ್ಕೃತಿಯ ನಡಿಗೆ ಮನೆ ಮನೆಗಳಿಗೆ ಮತ್ತು ಮನಮನಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಪಸರಿಸುವುದಾಗಿದೆ ಎಂಬುದಾಗಿ ಕಡೂರು ತಾಲ್ಲೂಕು ಸಿರಿಗನ್ನಡ ವೇದಿಕೆಯು ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ ತಿಳಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin