ಮಹಿಳಾ ಟೆಕ್ಕಿಗೆ ಟೀಂ ಲೀಡರ್‍ನಿಂದ ಲೈಂಗಿಕ ಕಿರುಕುಳ

ಈ ಸುದ್ದಿಯನ್ನು ಶೇರ್ ಮಾಡಿ

Online-Sex01
ಬೆಂಗಳೂರು, ನ.28- ಸಾಫ್ಟ್ ವೇರ್ ಕಂಪನಿಯೊಂದರ ಟೀಂ ಲೀಡರ್‍ವೊಬ್ಬ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗದೆ. ಬೆಳ್ಳಂದೂರು ವ್ಯಾಪ್ತಿಯಲ್ಲಿ ಸಾಫ್ಟ್ ವೇರ್ ಕಂಪನಿಯಿದ್ದು, ಇಲ್ಲಿನ ಟೀಂ ಲೀಡರ್ ಧೀರಜ್ ಶೆಟ್ಟಿ ಎಂಬಾತ ನ.17ರಂದು ಸಹೋದ್ಯೋಗಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಹಿಳೆ ಕಂಪನಿಯ ಆಡಳಿತ ಮಂಡಳಿಗೆ ಮೊದಲು ದೂರು ನೀಡಿದ್ದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನಿನ್ನೆ ಬೆಳ್ಳಂದೂರು ಠಾಣೆಗೆ ತೆರಳಿ ಟೀಂ ಲೀಡರ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin