ಮಹಿಳಾ ಸಹೋದ್ಯೋಗಿ ರಕ್ಷಣೆಗೆ ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

IAS--001

ನವದೆಹಲಿ, ಮೇ 30– ಈಜು ಕೊಳವೊಂದರಲ್ಲಿ ಮುಳುಗುತ್ತಿದ್ದ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಮುಂದಾದ ಐಎಎಸ್ ಅಧಿಕಾರಿಯೊಬ್ಬರು ನೀರುಪಾಲದ ದುರಂತ ದೆಹಲಿಯ ಬೆರ್ ಸರಾಯ್‍ನ ಫಾರಿನ್ ಸರ್ವಿಸ್ ಇನ್ಸ್‍ಟಿಟ್ಯೂಟ್‍ನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.   ಆಶೀಶ್ ದಹಿಯಾ (30) ಮೃತ ಐಎಎಸ್ ಅಧಿಕಾರಿ. ಹರ್ಯಾಣದ ಸೋನಾಪೇಟ್ ನಿವಾಸಿ. ಇವರು ಭಾರತೀಯ ವಿದೇಶಿ ಮತ್ತು ಆದಾಯ ಸೇವೆಗಳ ಸ್ನೇಹಿತರೊಂದಿಗೆ ಸಿವಿಲ್ ಸರ್ವಿಸ್ ತರಬೇತಿ ಸಂಸ್ಥೆಯ ಕ್ಲಬ್‍ನಲ್ಲಿ ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ನಡೆಯುತ್ತಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು.ಪಾರ್ಟಿಯಲ್ಲಿ ಭಾಗವಹಿಸಿದ್ದವರು ಈಜಲು ತೆರಳಿದಾಗ ಮಹಿಳಾ ಸಹೋದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರ ರಕ್ಷಣೆಗೆ ಆಶೀಶ್ ಸೇರಿದಂತೆ ಕೆಲವರು ಈಜುಕೋಳಕ್ಕೆ ಧುಮುಕಿದರು. ಮಹಿಳೆಯನ್ನು ರಕ್ಷಿಸಲಾಯಿತಾದರೂ ಆಶೀಶ್ ನಾಪತ್ತೆಯಾದರು. ನಂತರ ಅವರು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿ ತಕ್ಷಣ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು.

ಪಾರ್ಟಿಯಲ್ಲಿದ್ದವರು ಪಾನಮತ್ತರಾಗಿ ನೀರಿಗೆ ಇಳಿದಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin