ಮಹಿಳಾ ಸಿಬ್ಬಂದಿಗೆ ಜಾಡಿಸಿ ಒದ್ದ ಕಂಪೂಟರ್ ಆಪರೇಟರ್ (Video)

ಈ ಸುದ್ದಿಯನ್ನು ಶೇರ್ ಮಾಡಿ

Raaichur-Sharanappa

ರಾಯಚೂರು, ಜೂ.12- ಫೋನ್ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ನಗರಸಭೆಯ ದಿನಗೂಲಿ ನೌಕರ ಎಸ್‍ಡಿಎ ಮಹಿಳಾ ಸಿಬ್ಬಂದಿ ಗೆ ಜಾಡಿಸಿ ಒದ್ದು. ಹಲ್ಲೆ ನಡೆಸಿರುವ ಘಟನೆ ನಗರಸಭೆಯಲ್ಲಿ ನಡೆದಿದೆ. ದಿನಗೂಲಿ ನೌಕರ ನಗರಸಭೆಗೆ ಫೋನ್ ಬಂದಿದ್ದು ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಅದೇ ಕಚೇರಿಯಲ್ಲಿ ದಿನಗೂಲಿ ನೌಕರ ಶರಣಪ್ಪ ಸಿಟ್ಟಿನಿಂದ ಎಸ್‍ಡಿಎ ಮಹಿಳಾ ಸಿಬ್ಬಂದಿಗೆ ಜಾಡಿಸಿ ಒದ್ದು, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.




ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಿಂಧನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶರಣಪ್ಪನನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin