ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಯತ್ನಿಸಿದ ಗ್ರಾಪಂ ಅಧ್ಯಕ್ಷನ ಸದಸ್ಯತ್ವ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

rape--case

ಮಂಡ್ಯ,ಆ.13-ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಯತ್ನ ಸಂಬಂಧ ಮದ್ದೂರು ತಾಲ್ಲೂಕಿನ ಚಸ್ತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಹಾಸ  ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.   ಬಸವಲಿಂಗನದೊಡ್ಡಿ ಗ್ರಾಮದ ನಿವಾಸಿ ಚಂದ್ರಹಾಸ(32) ಕಳೆದ ವರ್ಷ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದರು. ನಂತರ ಸದಸ್ಯರ ಬಹುಮತಗಳಿಂದ ಚಸ್ತೂರು ಗ್ರಾಮಪಂಚಾಯ್ತಿಗೆ ಅಧ್ಯಕ್ಷರಾಗಿದ್ದರು.   ಕಳೆದ ಮೇ 26ರಂದು  ಪಂಚಾಯ್ತಿಯ  ಡಿಗ್ರೂಪ್ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು , ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವಿಷಯ ಸಾರ್ವಜನಿಕರು ಆಕ್ರೋಶಗೊಂಡು ಚಸ್ತೂರು ಪೊಲೀಸ್ ಠಾಣೆಗೂ ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಂಚಾಯತ್ ರಾಜ್ ಇಲಾಖೆಯು ಕರ್ನಾಟಕ ಗ್ರಾಮ ಪಂಚಾಯ್ತಿ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(43)ರ ಅನ್ವಯ ಚಂದ್ರಹಾಸನನ್ನು ಸದಸ್ಯತ್ವದಿಂದ ರದ್ದುಗೊಳಿಸಿದೆ.   ಅತ್ಯಾಚಾರಕ್ಕೆ ಯತ್ನಿಸಿದ್ದ ಗ್ರಾಪಂ ಅಧ್ಯಕ್ಷನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಪೊಲೀಸರ ವಶದಲ್ಲಿದ್ದ ಚಂದ್ರಹಾಸ  ಕೆಲವು ದಿನಗಲ ಹಿಂದೆ ಬೇಲ್ ಮೇಲೆ ಹೊರಬಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin