ಮಹಿಳಾ ಹಕ್ಕುಗಳ ಫಲಶ್ರುತಿ ದುರ್ಬಲವಾಗಬಾರದು : ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Woemn--01

ವಿಶ್ವಸಂಸ್ಥೆ, ಮಾ.8-ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಾಬಲ್ಯ ಸಾಧಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ಜೀದ್ ರಾದ್ ಅಲ್ ಹಸನ್, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಹಕ್ಕುಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಗಳಿಸಿರುವ ಪ್ರಯೋಜನಗಳ ಫಲಿತಾಂಶಗಳು ದುರ್ಬಲವಾಗಬಾರದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.   ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶ್ವ ಮಹಿಳಾ ಸಮುದಾಯಕ್ಕೆ ಶುಭ ಕೋರಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್, ತಮ್ಮ ಹಕ್ಕುಗಳನ್ನು ಗೌರವಿಸಬೇಕೆಂದು ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಒಗ್ಗೂಡಿ ಚಳವಳಿ-ಆಂದೋಲನಗಳನ್ನು ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

High Commissioner for Human Rights Zeid Ra’ad Al Hussein
High Commissioner for Human Rights Zeid Ra’ad Al Hussein

ಭಾರತ, ಅರ್ಜೆಂಟೈನಾ, ಪೋಲೆಂಡ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ನಡೆಯುತ್ತಿರುವ ಮಹಿಳಾ ಚಳವಳಿಗಳನ್ನು ನಾನು ಶ್ಲಾಘಿಸುತ್ತೇವೆ. ಲೈಂಗಿಕ ದೌರ್ಜನ್ಯ, ಲಿಂಗ ಅಸಮಾನತೆ, ಮಹಿಳಾ ಹತ್ಯೆ ಮತ್ತು ತಮ್ಮ ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.   ಕೆಲ ದೇಶಗಳಲ್ಲಿ ಬಾಲ್ಯ ವಿವಾಹ, ಅತ್ಯಾಚಾರ ಮತ್ತು ಗೃಹ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಇಂಥ ಪಿಡುಗುಗಳು ವನಿತೆಯರನ್ನು ದುರ್ಬಲಗೊಳಿಸುತ್ತಿವೆ. ಇವುಗಳ ವಿರುದ್ಧ ಪ್ರಮದೆಯರು ಸಂಘಟನಾತ್ಮಕ ಹೋರಾಟ ನಡೆಸಬೇಕೆಂದು ಅವರು ಕರೆ ನೀಡಿದರು. ಭಾರತದ ವನಿತೆಯರೂ ಸೇರಿದಂತೆ ಜಗತ್ತಿನ ನಾನಾ ದೇಶಗಳ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಪ್ರಶಂಸಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin