ಮಹಿಳೆಮೇಲೆ ಗ್ಯಾಂಗ್ ರೇಪ್, ಹತ್ಯೆ, ಆಸಿಡ್ ದಾಳಿ ಮಾಡಿದ ಆರೋಪದ ಮೇಲೆ ಯೋಧರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Rape BSF--01

ಮಾಮಿತ್, ಸೆ.7-ಈಶಾನ್ಯ ರಾಜ್ಯ ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಸಿಡ್ ಎರಚಿ, ಆಕೆಯ ಗೆಳತಿಯನ್ನು ಕೊಂದ ಆರೋಪದ ಮೇಲೆ ಗಡಿ ಭದ್ರತೆ ಪಡೆಯ(ಬಿಎಸ್‍ಎಫ್) ಇಬ್ಬರು ಯೋಧರನ್ನು ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶ ಮತ್ತು ತ್ರಿಪುರ ಗಡಿ ಜಿಲ್ಲೆಯ ಸಿಲ್ಸರಿಯಲ್ಲಿ ನಿಯೋಜಿತ ಸ್ಥಳದಿಂದ ಇಬ್ಬರು ಯೋಧರನ್ನು ಬಂಧಿಸಲಾಗಿದೆ ಎಂದು ಮಾಮಿತ್ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ತಾಪಾ ತಿಳಿಸಿದ್ದಾರೆ.

ಜುಲೈ 16ರಂದು ಚಕ್ಮಾ ಸಮುದಾಯಕ್ಕೆ ಸೇರಿದ ಮಹಿಳೆಯ ಮೇಲೆ ಬಿಎಸ್‍ಎಫ್ ಯೋಧರು ಸಾಮೂಹಿಕ ಅತ್ಯಾಚಾರ ಎಸಗಿ ಆಸಿಡ್ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಆಕೆಯ ಗೆಳತಿ ತಪ್ಪಿಸಿಕೊಂಡಿದ್ದರೂ ಯೋಧರು ಆಕೆಯನ್ನು ಬೆನ್ನಟ್ಟಿ ಕೊಂದಿದ್ದರು. ಜುಲೈ 22ರಂದು ಆಕೆಯ ಕೊಳೆತ ಶವ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿತ್ತು.

Facebook Comments

Sri Raghav

Admin