ಮಹಿಳೆಯನ್ನು ಮೇಲೆ ಗ್ಯಾಂಗ್‍ರೇಪ್ ಮಾಡಿ ರೈಲಿನಿಂದ ತಳ್ಳಿದ ಕಾಮುಕರು

ಈ ಸುದ್ದಿಯನ್ನು ಶೇರ್ ಮಾಡಿ

Train-01

ಮಾವು, ಸೆ.19– ಆಘಾತಕಾರಿ ಘಟನೆಯೊಂದರಲ್ಲಿ 35 ವರ್ಷದ ಮಹಿಳೆ ಮೇಲೆ ಚಲಿಸುವ ರೈಲಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು ಆಕೆಯನ್ನು ಹೊರಗೆ ತಳ್ಳಿದ ಪರಿಣಾಮ ಕಾಲು ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಮಾವು ಜಿಲ್ಲೆಯಲ್ಲಿ ಈ ಬರ್ಬರ ಘಟನೆ ನಡೆದಿದೆ. ಜೌನ್‍ಪು ಜಿಲ್ಲೆಯ ಶಹಗಂಜ್ ಪ್ರದೇಶದ ತನ್ನ ಮನೆಗೆ ತೆರಳಲು ಶನಿವಾರ ರಾತ್ರಿ ತಾಮ್ಸ ಪ್ಯಾಸೆಂಜರ್ ರೈಲಿನಲ್ಲಿ ಈ ಮಹಿಳೆ ತೆರಳುತ್ತಿದ್ದಳು. ಆಗ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಚಲಿಸುವ ರೈಲಿನಿಂದ ಹೊರಗೆ ತಳ್ಳಿದರು.
ಗ್ರಾಮಸ್ಥರು ಆಕೆಗೆ ಮಾವು ಪ್ರದೇಶದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಖುರತ್ ರೇಲ್ವೆ ನಿಲ್ದಾಣಕ್ಕೆ ಕರೆತಂದರು. ಆದರೆ, ಆಕೆಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವಾರಣಾಸಿಗೆ ಸ್ಥಳಾಂತರಿಸಲಾಯಿತು.

ಈ ಕೃತ್ಯದಲ್ಲಿ ಆಕೆ ಬಲಗಾಲು ಕಳೆದುಕೊಂಡಿದ್ದಾಳೆ. ಪೊ ಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin