ಮಹಿಳೆಯರಿಗೆ ಕಾನೂನು ಅರಿವು ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

kollegala--rotry

ಕೊಳ್ಳೇಗಾಲ,ಆ.18- ಕಾನೂನಿನ ಸಮರ್ಪಕ ತಿಳುವಳಿಕೆ ಇಲ್ಲದ ಕಾರಣ ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶಗಳ ಜನರು ಅನೇಕ ಹಕ್ಕು ಮತ್ತು ಸೌಲಭ್ಯಗಳಿಂದ ವಂಚನೆಗೊಳಗಾಗುವಂತಾಗಿದೆ ಎಂದು ಒಡಿಪಿ ಸೇವಾ ಪ್ರತಿನಿಧಿ ಮಾದೇಶಮ್ಮ ತಿಳಿಸಿದರು.  ರೋಟರಿ ಸಂಸ್ಥೆ ಮತ್ತು ಒಡಿಪಿ ಸಂಯುಕ್ತಾಶ್ರಯದಲ್ಲಿ ಮಧುವನಹಳ್ಳಿ ಜಿವಿಗೌಡ ನಗರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಏರ್ಪಡಿಸಿದ್ದ ಕಾನೂನು ಜಾಗೃತಿ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಕೀಲರಾದ ಡಿ. ವೆಂಕಟಾಚಲ ಮಹಿಳಾ ಹಕ್ಕುಗಳ ಕುರಿತು ಮಾತನಾಡಿ, ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ನಿತ್ಯ ಜೀವನದಲ್ಲಿ ಅವರಿಗೆ ಅನ್ವಯವಾಗುವ, ಅವರು ಪಾಲಿಸಬೇಕಾಗುವ, ಅವರಿಗೆ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಬಹಳ ಮುಖ್ಯ ಎಂದರು. ತಮಗೆ ಇರುವ ಹಕ್ಕುಗಳ ಬಗ್ಗೆ ಅರಿವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಮೇಲಿನ ದೌರ್ಜನ್ಯ ತಡೆಯ ಬಹುದಾಗಿದೆ ಎಂದು ತಿಳಿಸಿದರು. ಮಹಿಳೆಯರ ಹಕ್ಕುಗಳು, ಜೀವನಾಂಶ, ಬಾಲ್ಯ ವಿವಾಹ, ಜನನ ಮರಣ ಸೇರಿದಂತೆ ಇತರೆ ಕಾಯಿದೆಗಳ ಕುರಿತು ಅವರು ವಿಶೇಷ ಮಾಹಿತಿ ನೀಡಿದರು.
ಮಧುವನಹಳ್ಳಿ ಮಹದೇಶ್ವರ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಪಿ.ಎನ್. ಜ್ಯೋತಿ ಮಾತನಾಡಿ ಮಹಿಳೆಯರು ತಮ್ಮ ಬಗ್ಗೆ ಕೀಳರಿಮೆ ತೊರೆಯಬೇಕು. ಕುಟುಂಬ ಹಾಗೂ ನಮ್ಮ ಸಮಾಜದ ಅಭಿವೃದ್ಧಿಗೆ ನಾವು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುವ ಮೂಲಕ ನಮ್ಮ ಕೈಲಾದ ಸೇವೆ ಸಲ್ಲಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.ರೋಟರಿ ಅಧ್ಯಕ್ಷ ಪ್ರವೀಣ್ , ಇಂದ್ರ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಶಿವಮ್ಮ, ಧನಲಕ್ಷ್ಮಿ ಸಂಘದ ಮಣಿ, ಸೋಮಕುಮಾರಿ, ಉಮಾ, ಪ್ರೇಮಾ, ಸುಶೀಲಾ, ನಂದಿತಾ ಸ್ವಸಹಾಯ ಸಂಘ, ಮಹದೇಶ್ವರ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin