ಮಹಿಳೆಯರಿಗೆ ಟೈಲರಿಂಗ್ ಯಂತ್ರಗಳ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

NANJANAGUDU

ನಂಜನಗೂಡು, ಫೆ.4- ಇವತ್ತಿನ ಪರಿಸ್ಥಿತಿಯಲ್ಲಿ ಒಂದು ಕುಟುಂಬದಲ್ಲಿ ಏಕೈಕ ವ್ಯಕ್ತಿಯ ಆದಾಯದಿಂದ ಜೀವನ ಸಾಗಿಸಲು ಸಾಧ್ಯವಿಲ್ಲವೆಂದು ಸರ್ಕಾರ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುತ್ತಿದ್ದು ಇದರಿಂದ ಸಂಸಾರ ನಿರ್ವಹಣಗೆ ಸಹಾಯಕವಾಗಲಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಬಿಎಸ್.ಮಹದೇವಪ್ಪ ತಿಳಿಸಿದರು.ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ, 2015-16ನೇ ಸಾಲಿನ ಮಹಿಳಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ಪ್ರವೇಶ ಪಡೆದು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ 16ಮಂದಿ ಅಭ್ಯರ್ಥಿಗಳಿಗೆ ಹೊಲಿಗೆಯಂತ್ರ ವಿತರಿಸಿ ಮಾತನಾಡಿದರು.ತಮ್ಮ ಸ್ವಂತ ಕಾಲಮೇಲೆ ನಿಂತು, ಕುಟುಂಬವನ್ನು ಅರ್ಥಿಕವಾಗಿ ಮೇಲೆ ತರಲು ಮತ್ತು ಜೀವನ ಸಾಗಿಸಲು ಸಹಾಯವಾಗಲೆಂದು ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದು ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.ಹೊಲಿಗೆಯಂತ್ರದ ವಿತರಣಾ ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಬಿಎಸ್.ಮಹದೇವಪ್ಪ, ಉಪಾಧ್ಯಕ್ಷರಾದ ಹೆಜ್ಜಿಗೆ ಗೋವಿಂದರಾಜನ್, ಸಾ.ಸ್ಥಾ.ಸಮಿತಿ ಶಿವಣ್ಣ, ಅಧಿಕಾರಿ ಚೆನ್ನರುದ್ರಯ್ಯ ಮುಂತಾದವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin