ಮಹಿಳೆಯರಿಗೆ ಸುರಕ್ಷಿತವಲ್ಲದ ಸಂಪ್ರದಾಯಗಳನ್ನು ತ್ಯಜಿಸಿ : ಮಂಜುಳಾ ಮಾನಸ

ಈ ಸುದ್ದಿಯನ್ನು ಶೇರ್ ಮಾಡಿ

Tumakuru

ತುಮಕೂರು, ಆ.10- ನಮ್ಮಲ್ಲಿರುವ ಅನೇಕ ಸಂಪ್ರದಾಯಗಳು ಕೆಲವೊಮ್ಮೆ ನಮ್ಮ ಜೀವಕ್ಕೂ ಸಹ ಸಂಚಕಾರಗಳನ್ನು ಉಂಟು ಮಾಡುತ್ತವೆ. ಆದ್ದರಿಂದ ಸುರಕ್ಷಿತವಲ್ಲದ ಸಂಪ್ರದಾಯಗಳನ್ನು ನಾವು ಕಡ್ಡಾಯವಾಗಿ ತ್ಯಜಿಸಿದರೆ ಮಾತ್ರ ನಮಗೆ ಸುರಕ್ಷತೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ಕರಡಿ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕು ಬೆಳ್ಳಾವಿ ಹೋಬಳಿ ಪಾಲಿಹಟ್ಟಿ ಗ್ರಾಮದ ಚಿತ್ತಮ್ಮ ಅವರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಚಿತ್ತಮ್ಮ ಅವರನ್ನು ಮಾತನಾಡಿಸಿದಾಗ ಆಕೆ ಬಹಿಷ್ಕಾರವಾಗಿದ್ದು, ಆ ಸಂದರ್ಭದಲ್ಲಿ ಊರ ಹೊರಗೆ ಬೆಳಗಿನ ಜಾವ ತೆರಳುತ್ತಿದ್ದಾಗ ಇಂತಹ ಅವಘಡ ಜರುಗಿದೆ ಎಂದು ತಿಳಿಸಿದರು.ಆದ್ದರಿಂದ ಮಹಿಳೆಯರಿಗೆ ಸುರಕ್ಷಿತವಲ್ಲದ ಸಂಪ್ರದಾಯಗಳನ್ನು ನಾವು ಬಿಡುವ ಮೂಲಕ ಮಹಿಳೆಯರಲ್ಲಿ ಅಸುರಕ್ಷತೆಯನ್ನು ಹೋಗಲಾಡಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಂಜೇಗೌಡ, ನಿವಾಸಿ ವೈದ್ಯಾಧಿಕಾರಿ ಡಾ: ರುದ್ರಮೂರ್ತಿ ಮುಂತಾದವರು ಹಾಜರಿದ್ದರು.

Facebook Comments

Sri Raghav

Admin