ಮಹಿಳೆಯರೇ, ಯಾರಾದರೂ ಲೈಂಗಿಕ ಕಿರುಕುಳ ಕೊಟ್ಟರೆ ಇನ್ಮುಂದೆ ಆನ್‍ಲೈನ್ ನಲ್ಲೆ ದೂರು ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

Online-Sex01

ನವದೆಹಲಿ,ನ.3- ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆನ್‍ಲೈನ್ ಮೂಲಕ ದೂರು ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಹಿತ ದೃಷ್ಟಿಯಿಂದ, ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯ ಮೇಲೆ, ಇಲಾಖೆಯಲ್ಲಿನ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದರೆ ನೇರವಾಗಿ www.shebox.nic.in  ವೈಬ್‍ಸೈಟ್‍ಗೆ ಭೇಟಿ ನೀಡಿ ದೂರ ನೀಡಬಹುದು.

ಈ ವೈಬ್‍ಸೈಟ್‍ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ನೀಡಲು ಲಿಂಕ್ ನೀಡಲಾಗಿದ್ದು, ಈ ಲಿಂಕ್ ಕ್ಲಿಕ್ಕಿಸುವ ಮೂಲಕ, ತಮ್ಮ ಇಲಾಖೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಅಧಿಕಾರಿಯ ಬಗ್ಗೆ ಆಡಳಿತ ಮತ್ತು ಸಿಬ್ಬಂದಿ ಇಲಾಖೆಗೆ ನೇರವಾಗಿ ದೂರು ಸಲ್ಲಿಕೆಯಾಗುತ್ತದೆ. ಈ ಮೂಲಕ ಸಂತ್ರಸ್ಥ ಮಹಿಳೆಗೆ ಭದ್ರತೆಯೂ ದೊರೆಯುತ್ತದೆ ಎಂದು ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin