ಮಹಿಳೆಯರ ಒಳ ಉಡುಪು ಕದ್ದು, ಧರಿಸಿ ಖುಷಿಪಡುತ್ತಿದ್ದ ಸೈಕೋ ಸಿಕ್ಕಿಬಿದ್ದ

ಈ ಸುದ್ದಿಯನ್ನು ಶೇರ್ ಮಾಡಿ

Phsyco--Arrested

ಬೆಂಗಳೂರು, ಮಾ.22-ಮಹಾರಾಣಿ ಮಹಿಳಾ ಕಾಲೇಜಿನ ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕಳವು ಮಾಡಿ ಧರಿಸಿಕೊಂಡು ವಿಕೃತವಾಗಿ ವರ್ತಿಸುತ್ತಿದ್ದ ಸೈಕೊ ಕಡೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಮೂಲತಃ ಬಿಹಾರ ರಾಜ್ಯದ ಸಿಂಗಾಡಿಗ್ರಾಮದವನಾದ ಅಬುತಲೀಮ್ (37) ಬಂಧಿತ ಸೈಕೊ.  ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದ ಈತ ರೇಸ್‍ಕೋರ್ಸ್‍ನ ಲಾಯದಲ್ಲಿದ್ದುಕೊಂಡು ನೀಲ್‍ದಾರ ಸಾ ಎಂಬುವರ ಕುದುರೆ ಸಾಕುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾಹಿತನಾಗಿದ್ದು, ಇಬ್ಬರು ಗಂಡು ಮಕ್ಕಳು ಹೊಂದಿರುವ ಈತ ಮಹಿಳೆಯರ ಒಳ ಉಡುಪು ಧರಿಸುವ ವಿಕೃತ ಮನಸ್ಸಿನವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ರಾತ್ರಿ ವೇಳೆ ವಿದ್ಯಾರ್ಥಿನಿ ನಿಲಯಕ್ಕೆ ಅಕ್ರಮವಾಗಿ ಪ್ರವೇಶಿಸಿ ತಾರಸಿ ಮೇಲೆ ಒಣ ಹಾಕಿದ್ದ ವಿದ್ಯಾರ್ಥಿನಿಯರ ಒಳ ಉಡುಪು ಕಳವು ಮಾಡಿ ಕಾಟ ಕೊಡುತ್ತಿದ್ದ. ಒಳ ಉಡುಪು ಕಳವು ಮಾಡುವ ದೃಶ್ಯ ಅಲ್ಲಿನ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಘಟನೆಯಿಂದ ವಿದ್ಯಾರ್ಥಿನಿಯರು ಆತಂಕಗೊಂಡಿದ್ದರು.
ಆಗಾಗ ಹಾಸ್ಟೆಲ್‍ಗೆ ಬರುತ್ತಿದ್ದ ವಿಕೃತ ಕಾಮಿಯ ಬಗ್ಗೆ ಹಾಸ್ಟೆಲ್‍ನ ವಾರ್ಡನ್ ಸುಮಿತ್ರಾ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು.

ಬೆತ್ತಲಾಗಿ ಮೈ ತುಂಬ ಎಣ್ಣೆ ಸವರಿಕೊಂಡು ಬರುತ್ತಿದ್ದ ಸೈಕೊ ಬಲಗೈಯಲ್ಲಿ ಚಾಕು, ಎಡಗೈಲಿ ಬಾಟಲಿ ಹಿಡಿದಿರುತ್ತಿದ್ದ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಸೈಕೊ ಬಂಧನಕ್ಕೆ ಮೂರು ವಿಶೇಷ ತಂಡಗಳು ರಚನೆಗೊಂಡು ಕಾರ್ಯಾಚರಣೆಗೆ ಇಳಿದಿದ್ದವು. ಇಂದು ಆರೋಪಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಡಿಸಿಪಿ ಡಾ.ಚಂದ್ರಗುಪ್ತ ಅವರ ಮಾರ್ಗದರ್ಶನ, ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ಪ್ರಭಾಕರ ವಿ.ಭಾರ್ಕಿ ಅವರ ನೇತೃತ್ವದಲ್ಲಿ ಹೈಗ್ರೌಂಡ್ಸ್ ಠಾಣೆ ಇನ್‍ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ, ಪಿಎಸ್‍ಐ ಶ್ರೀಮೂರ್ತಿ, ಪ್ರೊಬೆಷನರಿ ಎಸ್‍ಐ ಹನುಮಂತ ನರಳೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin