ಮಹಿಳೆಯರ ಬಯಲು ಶೌಚದ ಫೋಟೊ ತೆಗೆಯಲು ಅಡ್ಡಿಪಡಿಸಿದ ವ್ಯಕ್ತಿಯ ಭೀಕರ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Man-nMurder

ಜೈಪುರ್, ಜೂ.17-ಮಹಿಳೆಯರ ಬಯಲು ಶೌಚ ದೃಶ್ಯಗಳ ಫೋಟೋ ತೆಗೆಯುವುದನ್ನು ತಡೆಯಲೆತ್ನಿಸಿದ ವ್ಯಕ್ತಿಯನ್ನು ನಗರಸಭೆ ನೌಕರರು ಭೀಕರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ತಾನದ ಪ್ರತಾಪ್‍ಗಢದಲ್ಲಿ ನಡೆದಿದೆ.  ಬಗ್‍ವಾಸ್ ಕಚ್ಚಿ ಬಸ್ತಿ ಗ್ರಾಮದ ಮಹಿಳೆಯರು ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದಾಗ ಆ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ನಗರಸಭೆ ನೌಕರರು ಮುಂದಾದರು. ಸಾಮಾಜಿಕ ಕಾರ್ಯಕರ್ತರಾದ 55 ವರ್ಷದ ಜಫರ್ ಖಾನ್ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು.

ಆಗ ಮಾತಿನ ಚಕಮಕಿ ನಡೆದು ನೌಕರರು ಖಾನ್ ಮುಖಕ್ಕೆ ಗುದ್ದಿ, ಹೊಟ್ಟೆ ಮತ್ತು ಎದೆ ಭಾಗಕ್ಕೆ ಒದ್ದರು. ಅಲ್ಲದೆ ಕೋಲುಗಳಿಂದ ಮನಬಂದಂತೆ ಧಳಿಸಿದರು. ತೀವ್ರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.   ಹಲ್ಲೆ ಮತ್ತು ಹೃದಯಾಘಾತದಿಂದ ಖಾನ್ ಮೃತಪಟ್ಟಿದ್ಧಾರೆ ಎಂದು ವೈದ್ಯಕೀಯ ವರದಿ ಹೇಳಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin