ಮಹಿಳೆಯ ಕೈ ಕಟ್ಟಿಹಾಕಿ ಚಿನ್ನಾಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

robbery

ಮದ್ದೂರು,ಸೆ.14- ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಮಹಿಳೆಗೆ ಚಾಕು ತೋರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ. ನಿನ್ನೆ ಸಂಜೆ ಪದ್ಮ ಎಂಬುವರು ವಾಕಿಂಗ್ ಹೋಗಿ ಮನೆಗೆ ಹಿಂದುರಿಗಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮನೆ ಬಾಗಿಲಲ್ಲಿ ನಿಂತು ಆಕೆಗೆ ಚಾಕು ತೋರಿಸಿ ಬೆದರಿಸಿರುವುದಲ್ಲದೆ ಆಕೆಯ ಕೈಗಳನ್ನು ಕಟ್ಟಿ 60 ಗ್ರಾಂ ಸರ, 30 ಗ್ರಾಂ ಚಿನ್ನದ ಬಳೆ ಹಾಗೂ ಒಂದು ಸಾವಿರ ನಗದು ಕಸಿದು ಪರಾರಿಯಾಗಿದ್ದಾನೆ. ಈ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin