ಮಾಂಗಲ್ಯ ಸರ ಎಗರಿಸಿದ ಖದೀಮ

ಈ ಸುದ್ದಿಯನ್ನು ಶೇರ್ ಮಾಡಿ

chain-snatch

ಕೆ.ಆರ್.ನಗರ,ಸೆ.21:- ಅಪರಿಚಿತ ಯುವಕರ ಗುಂಪೊಂದು  ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.ಪಟ್ಟಣದ ಬಸವೇಶ್ವರ ಬಡಾವಣೆಯ ನಿವಾಸಿ ಆರ್.ಜಿ.ಮಹದೇವ್ ಎಂಬುವವರ ಪತ್ನಿ ಸಂಗೀತ ಎಂಬುವವರೇ ಸರ ಕಳೆದುಕೊಂಡ ಮಹಿಳೆ.ನಿನ್ನೆ ಸಂಜೆ 6.30ರ ಸಮಯದಲ್ಲಿ ತಮ್ಮ ಸಂಬಂಧಿಕರ ಮನೆಯಿಂದ ತೆರಳುತ್ತಿರುವ ಸಮಯದಲ್ಲಿ ಹಿಂಭಾಗದಿಂದ ಬೈಕ್‍ನಲ್ಲಿ ಆಗಮಿಸಿದ ಅಪರಿಚಿತರ ಗುಂಪು ಸುಮಾರು 2 ಲಕ್ಷ ಬೆಲೆಯ 50 ಗ್ರಾಂ ತೂಕದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಮಹಿಳೆಯ ಪತಿ ಮಹದೇವ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin