`ಮಾಂಜಾ’ದಲ್ಲಿ ಅನೀಶ್ – ದೀಪಾ ಸನ್ನಿಧಿ
ಎಸ್ ಟು ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಹಿಂದೆ ಅಕಿರ ಚಿತ್ರ ನಿರ್ಮಿಸಿದ್ದ ಸೋಮಶೇಖರ್ ರೆಡ್ಡಿ ಮರಸೂರು, ಚೇತನ್ ಕುಮಾರ್ ಮತ್ತು ಶ್ರೀಕಾಂತ್ ಪ್ರಸನ್ನ ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರ ನಿರ್ದೇಶನದ ಹೊಣೆಯನ್ನು ಯಶ್ ಅಭಿನಯದ ಲಕ್ಕಿ ಸಿನೆಮಾ ನಿರ್ದೇಶಿಸಿದ ಡಾ.ಸೂರಿ ವಹಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಾಂಜ ಎಂದು ಶೀರ್ಷಿಕೆ ಇಟ್ಟಿದ್ದು, ನಾಯಕ ನಟನಾಗಿ ಅನೀಶ್ ಹಾಗೂ ನಾಯಕಿಯಾಗಿ ದೀಪಾ ಸನ್ನಿಧಿ ಅಭಿನಯಿಸುತ್ತಿದ್ದಾರೆ.
ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ, ಸಾಧು ಕೋಕಿಲಾ, ಅಚ್ಯುತ್ ಕುಮಾರ್, ಅವಿನಾಶ್ ಮುಂತಾದ ನಟರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ರಸೂಲ್ ಎಲ್ಲೋರ್ (ತೆಲುಗಿನ ಜಲ್ಸಾ, ಕಿಕ್, ಊಸರವಳ್ಳಿ ಖ್ಯಾತಿ) ಛಾಯಾಗ್ರಹಣ ಮಾಡುತ್ತಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ನಾಯಕ ನಟ ಯಶ್ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದರು.
► Follow us on – Facebook / Twitter / Google+