ಮಾಗಳಿ ರವಿ ನಿಗೂಢ ಸಾವು ಖಂಡಿಸಿ ನಾಳೆ ನಾಲ್ಕು ತಾಲ್ಲೂಕುಗಳು ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Magali-Ravi-Murder-Mysuru

ಮೈಸೂರು, ನ.6-ಬಿಜೆಪಿ ಕಾರ್ಯ ಕರ್ತ ರವಿ ಮಾಗಳಿ ಅವರ ಸಾವಿನ ಘಟನೆ ಖಂಡಿಸಿ ನಾಳೆ ಪಿರಿಯಾಪಟ್ಟಣ ಸೇರಿದಂತೆ ನಾಲ್ಕು ತಾಲೂಕುಗಳ ಬಂದ್‍ಗೆ ಬಿಜೆಪಿ ಕರೆ ಕೊಟ್ಟಿದೆ.  ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ ನಾಲ್ಕು ತಾಲೂಕುಗಳಲ್ಲಿ ಬಂದ್ ಆಚರಣೆ ಮಾಡುವ ಮೂಲಕ ರವಿ ಅವರ ಸಾವಿನ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲು ಬಿಜೆಪಿ ತೀರ್ಮಾನಿಸಿದೆ. ಮಾಗಳಿ ರವಿ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಆರು ಮಂದಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಕೆಲವು ಶಕ್ತಿಗಳು ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಹತ್ಯೆ ಮಾಡುತ್ತಿದ್ದಾರೆ. ಸರ್ಕಾರ ಇಂತಹ ಶಕ್ತಿಗಳ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ರವಿ ಅವರ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣವನ್ನು ಅಪಘಾತ ಎಂದು ದಾಖಲಿಸಲಾಗಿದೆ. ಕೊಲೆಯೆಂದು ಸಂಶಯ ವ್ಯಕ್ತವಾಗಿದ್ದರೂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.

ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ನಡೆದ ಬೆನ್ನಲ್ಲೇ ಪಿರಿಯಾಪಟ್ಟಣದ ಬಿಜೆಪಿ ಕಾರ್ಯಕರ್ತ ರವಿ ಅವರ ಹತ್ಯೆಯಾಗಿದೆ. ಶಾಂತಿ ಸಭೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಇವರ ಸಾವು ಸಂಭವಿಸಿದೆ. ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದರೂ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿಲ್ಲ. ನಾಳೆ ನಾಲ್ಕು ತಾಲೂಕುಗಳಲ್ಲಿ ನಡೆಸುವ ಬಂದ್ ಸಂದರ್ಭದಲ್ಲಿ ಈ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗುವುದು ಎಂದು ಪ್ರತಾಪ್‍ಸಿಂಹ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin