ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್’ರಿಂದ ರೈತರಿಗೆ ಜೀವ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Chandrashekhar-02

ಕೆ.ಆರ್.ಪೇಟೆ,ನ.18-ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ 14 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮಾಜಿ ಶಾಸಕರೊಬ್ಬರು ಇಬ್ಬರು ರೈತರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಶ್ರೀನಿವಾಸ್ ಮತ್ತು ಆಮ್ಲೆಟ್ ರಾಜಣ್ಣ ಜೀವ ಬೆದರಿಕೆಗೊಳಗಾದ ರೈತರು. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಜಮೀನು ವಿಷಯವಾಗಿ ಈ ಇಬ್ಬರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.  ಹೊನ್ನೇನಹಳ್ಳಿ ಗ್ರಾಮದ ಆಮ್ಲೆಟ್ ರಾಜಣ್ಣನವರಿಗೆ ಸೇರಿದೆ ಎನ್ನಲಾದ ಸರ್ವೆ ನಂ.51ರಲ್ಲಿ 14 ಗುಂಟೆ ಜಾಗವಿದ್ದು , ಈ ಜಾಗ ಮಾಜಿ ಶಾಸಕರಿಗೆ ಸೇರಿದ್ದು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಇವರಿಬ್ಬರ ನಡುವೆ ಗಲಾಟೆ ನಡೆಯಿತ್ತಿತ್ತು. ಆ ಜಾಗದಲ್ಲಿ ಟ್ರ್ಯಾಕ್ಟರ್‍ನಿಂದ ಉಳುಮೆ ಮಾಡಲು ಹೋದರೆ ಟ್ರ್ಯಾಕ್ಟರ್‍ನ್ನೇ ಸುಟ್ಟು ಹಾಕಿ ಜೀವ ತೆಗೆಯುತ್ತೇನೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಕೆ.ಆರ್.ಪೇಟೆ ಠಾಣೆಗೆ ದೂರು ನೀಡಲು ಹೋದರೆ ಮಾಜಿ ಶಾಸಕರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆಮ್ಲೆಟ್ ರಾಜಣ್ಣ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin