ಮಾಜಿ ಸಚಿವ ಕೆ.ಎಚ್. ಹನುಮೇಗೌಡ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Hanumnegowda--01
ಹಾಸನ. ಮೇ . 13 : ಮಾಜಿ ಸಚಿವ, ಹಿರಿಯ ರಾಜಕೀಯ ನಾಯಕ ಕೆ.ಹೆಚ್.ಹನುಮೇಗೌಡ ನಿಧನರಾಗಿದ್ದಾರೆ. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಇಂದು ಸಂಜೆ 6.30 ರ ಸುಮಾರಿಗೆ  ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೂವರು ಗಂಡು ಮಕ್ಕಳು, ( ಒಬ್ಬ ಮಗ ಸುರೇಶ್ ತೀರಿಕೊಂಡಿದ್ದಾರೆ ) ಇಬ್ಬರು ಹೆಣ್ಣುಮಕ್ಕಳನ್ನು ಅವರು ಅಗಲಿದ್ದಾರೆ. 4 ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿದ್ದ ರು. 1994 ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕೂಡಾ ಸಚಿವರಾಗಿದ್ದರು.

ಹಾಸನ ತಾಲ್ಲೂಕಿನ ಕೆ.ಬ್ಯಾಡರಹಳ್ಳಿಯ ಹನುಮೇಗೌಡರು ರಾಜಕೀಯ ಜೀವನ ಆರಂಭಿಸಿದ್ದು 1972 ರಲ್ಲಿ. ಸಂಸ್ಥಾ ಕಾಂಗ್ರೆಸ್‌ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಹನುಮೇಗೌಡರು, 1994 ರಲ್ಲಿ ಸಚಿವರಾಗಿದ್ದರು. ಮಾಜಿ ಸಚಿವ ದಿ.ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ಅವರೊಂದಿಗೆ ಸಂಘರ್ಷ ಸಾರಿ ಬಿಜೆಪಿ ಗೆ ಸೇರ್ಪಡೆ ಯಾಗಿ 1999ರಲ್ಲಿ ಆ ಪಕ್ಷದಿಂದ ಶಾಸಕರಾಗಿದ್ದರು. ಬಿಜೆಪಿಯಿಂದ ಲೋಕಸಭೆಗೂ ಸ್ಪರ್ಧಿಸಿದ್ದರು. ಅವರ ಪಾರ್ಥಿವ ಶರೀರವನ್ನು ಕುವೆಂಪು ನಗರದ ಅರವಿಂದ ಶಾಲೆ ಸಮೀಪದ ನಿವಾಸದಲ್ಲಿ ಇಡಲಾಗಿದೆ. ನಾಳೆ ಸುರಪುರ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Facebook Comments

Sri Raghav

Admin