ಮಾಜಿ ಸರ್‍ಪಂಚ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

Sarpanch

ಶ್ರೀನಗರ, ಅ.3-ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಡಿಜಲ್ ಗ್ರಾಮದಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರು ಓರ್ವ ಮಾಜಿ ಸರ್‍ಪಂಚ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದ ನ್ಯಾಷನಲ್ ಕಾನ್ಫೆರೆನ್ಸ್‍ನ ಸ್ಥಳೀಯ ನಾಯಕ ಫಯಾಜ್ ಅಹಮದ್ ಭಟ್‍ರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು.  ಗ್ರಾಮ ಮುಖಂಡ ಮತ್ತು ಮಾಜಿ ಸರ್‍ಪಂಚರು ಆಗಿದ್ದ ಫಯಾಜ್ ಮನೆಗೆ ನುಗ್ಗಿದ ಭಯೋತ್ಪಾದಕರು ತೀರಾ ಹತ್ತಿರದಿಂದ ಅವರ ಮೇಲೆ ಗುಂಡಿನ ಮಳೆಗರೆದರು. ಇತ್ತೀಚಿನ ದಿನಗಳಲ್ಲಿ ಸರಪಂಚರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin