ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಈ ಸುದ್ದಿಯನ್ನು ಶೇರ್ ಮಾಡಿ

RepublicDay-30

ಬೆಂಗಳೂರು, ಜ.26- ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಹಾತ್ಮಗಾಂಧಿ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.  ಭಾರತದ ಅಖಂಡತೆ ಸಾರುವ ವಿಶೇಷ ಕಾರ್ಯಕ್ರಮಗಳು ಮಕ್ಕಳ ನೃತ್ಯ ರೂಪಕಗಳಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ದೇಶಭಕ್ತಿ, ವಿವಿಧತೆಯಲ್ಲಿ ಏಕತೆ, ರಾಷ್ಟ್ರ ನಾಯಕರ ಸಂದೇಶಗಳನ್ನು ಒಳಗೊಂಡ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಒಟ್ಟಾರೆ ಇಡೀ ಪರೇಡ್ ಮೈದಾನ ವಿವಿಧ ವೇಷ-ಭೂಷಣ ತೊಟ್ಟ ಮಕ್ಕಳ ಹಾಡು, ನೃತ್ಯಗಳ ಸಂಗಮದಿಂದ ಕಳೆ ಕಟ್ಟಿತ್ತು. ಆರಂಭದಲ್ಲಿ ಮೃತ್ಯುಂಜಯ ದೊಡ್ಡವಾಡಿ ಮತ್ತು ತಂಡದಿಂದ ನಾಡಗೀತೆ ಮತ್ತು ರೈತ ಗೀತೆ ಸುಶ್ರಾವ್ಯವಾಗಿ ಮೂಡಿಬಂತು.  ಹೆಗ್ಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುಮಾರು 650 ಮಕ್ಕಳು ಪ್ರಸ್ತುತಪಡಿಸಿದ ನಾವು ಭಾರತೀಯರು ನೃತ್ಯ ರೂಪಕ, ಕಲೆ, ವಿಜ್ಞಾನದ ಅನಾವರಣದೊಂದಿಗೆ ದೇಶದಲ್ಲಿನ ಏಕತೆಯ ಮೂಲಮಂತ್ರವನ್ನು ಸಾದರಪಡಿಸಿತು.

ಗಿರಿನಗರದ ಮಾರ್ಟಿನ್ ಲೂಥರ್ ಪ್ರೌಢಶಾಲೆಯ 600 ಮಕ್ಕಳು ನಡೆಸಿಕೊಟ್ಟ ಯುವಶಕ್ತಿ ವೈಭವ, ಒಂದೇ ಮಾತರಂನಲ್ಲಿ ದೇಶದಲ್ಲಿ ಯುವಶಕ್ತಿಯ ಪಾತ್ರವೇನು, ಅವರ ಪ್ರಾಮುಖ್ಯತೆ ಏನು, ಗಾಂಧೀಜಿ ಸಂದೇಶಗಳನ್ನು ಕಾರ್ಯಕ್ರಮಗಳ ಮೂಲಕ ಅನಾವರಣಗೊಳಿಸಿದ್ದು ಕಣ್ಮನ ಸೆಳೆಯಿತು. ಉತ್ತರಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳು ಅಭಿನಯಿಸಿದ ನಾವೆಲ್ಲರೂ ಒಂದೇ ಎಂಬ ಅಂಬೇಡ್ಕರ್ ಕುರಿತ ರೂಪಕ ಏಕತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು.  ಸ್ವಾತಂತ್ರ್ಯ ಪೂರ್ವದ ಇತಿಹಾಸ ಸಾರುವ ನಾಟಕ, ಭಾವೈಕ್ಯತೆ ಮೂಡಿಸುವ ನೃತ್ಯಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದವು.

ವಿದ್ಯಾರಣ್ಯಪುರ ಮುಖ್ಯರಸ್ತೆಯ ದೊಡ್ಡಬೊಮ್ಮಸಂದ್ರದ ಸೇಂಟ್ ಫಿಲೋಮಿನ ಆಂಗ್ಲ ಮಾಧ್ಯಮ ಶಾಲೆಯ 600 ಮಕ್ಕಳು ಗಣರಾಜ್ಯೋತ್ಸವದ ಸಂಭ್ರಮ ಎಂಬ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವದ ವೈಶಿಷ್ಟ್ಯತೆಗಳನ್ನು ಪರಿಚಯಿಸಿದರು.  ಪಥ ಸಂಚಲನದ ವೇಳೆ ಸುರಿದ ತುಂತುರು ಮಳೆಯಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಮೂಡಿತು.
ಇದೇ ವೇಳೆ ಪಥ ಸಂಚಲನ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.  ಇದಕ್ಕೂ ಮುನ್ನ ಬೆಳಗ್ಗೆ 8.58ಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಪರೇಡ್ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ಪರಿಚಯಿಸಲಾಯಿತು.

9 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ರಾಜ್ಯಪಾಲರು ನೆರವೇರಿಸಿದ ಮೇಲೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪುಷ್ಪವೃಷ್ಠಿಗರೆಯಿತು. ನಂತರ ಪರೇಡ್ ವೀಕ್ಷಿಸಿ ಗೌರವ ರಕ್ಷಣೆ ಸ್ವೀಕರಿಸಿದ ರಾಜ್ಯಪಾಲರು ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಯ ಮಕ್ಕಳು ಕವಾಯತು ಮತ್ತು ಬ್ಯಾಂಡ್‍ನೊಂದಿಗೆ ಶಿಸ್ತಿನ ಸಿಪಾಯಿಯಂತೆ ಪಥ ಸಂಚಲನ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

RepublicDay-1

RepublicDay-2

RepublicDay-3

RepublicDay-4

RepublicDay-5

RepublicDay-6

RepublicDay-7

RepublicDay-8

RepublicDay-9

RepublicDay-11

RepublicDay-12

RepublicDay-13

RepublicDay-14 RepublicDay-15

RepublicDay-16

RepublicDay-17

RepublicDay-18

RepublicDay-19

RepublicDay-20

RepublicDay-21

RepublicDay-22

RepublicDay-23

RepublicDay-24

RepublicDay-25

RepublicDay-26

RepublicDay-27

Facebook Comments

Sri Raghav

Admin