ಮಾತು ತಪ್ಪಿದ ಮೋದಿ ಮಂತ್ರಿಗಳು : ಅಂಕಿ-ಅಂಶಗಳಿಂದ ಬಣ್ಣ ಬಹಿರಂಗ..!

ಈ ಸುದ್ದಿಯನ್ನು ಶೇರ್ ಮಾಡಿ

Modi-And-Team

ನವದೆಹಲಿ, ಫೆ.5-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕಳೆದ ಎರಡು ವರ್ಷಗಳಿಂದ ಸಂಸತ್ತಿನಲ್ಲಿ ಸಚಿವರಿಂದ ನೀಡಲಾದ ಭರವಸೆಗಳಲ್ಲಿ ಈಡೇರಿರುವ ಭರವಸೆ ಕೇವಲ ಮೂರನೇ ಒಂದು ಭಾಗದಷ್ಟು ಮಾತ್ರ. ಅಲ್ಲದೇ ಬಹುತೇಕ ಐದನೇ ಒಂದು ಭಾಗದಷ್ಟು ಆಶಾಸ್ವನೆಗಳನ್ನು ಕೈಬಿಡಲಾಗಿದೆ.  ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಅಂದರೆ 2015 ಮತ್ತು 2016ರಲ್ಲಿ ಅವಧಿಯಲ್ಲಿ ಸಚಿವರು 1,877 ಭರವಸೆಗಳನ್ನು ನೀಡಿದ್ದಾರೆ. ಅದರಲ್ಲಿ ಕಾರ್ಯಗತಗೊಂಡಿರುವುದು 552 ಆಶ್ವಾಸನೆಗಳು ಮಾತ್ರ. 392 ಭರವಸೆಗಳಿಗೆ ತಿಲಾಂಜಲಿ ನೀಡಲಾಗಿದ್ದು, 893 ವಾಗ್ದಾನಗಳು ಈಡೇರದೇ ಬಾಕಿ ಉಳಿದಿವೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕಾದ ಜವಾಬ್ದಾರಿ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸೇರಿದ್ದಾಗಿದೆ. ಆದರೆ ಮಂತ್ರಿಮಹೋದಯರು ಅವುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸೂಕ್ತ ಗಮನಹರಿಸುವುದಿಲ್ಲ ಎಂದು ಅಂಕಿ ಅಂಶದಲ್ಲಿ ತಿಳಿಸಲಾಗಿದೆ.   ಪ್ರತಿ ಭರವಸೆಯ ಸಾರಾಂಶಗಳನ್ನು ಪಡೆದ ಸಂಬಂಧಪಟ್ಟ ಸಚಿವಾಲಯವು ಆಶ್ವಾಸನೆ ನೀಡಿದ ದಿನಾಂಕದಿಂದ ಮೂರು ತಿಂಗಳ ಒಳಗೆ ಅದನ್ನು ಈಡೇರಿಸಲಾಗುತ್ತದೆ ಎಂದು ತಿಳಿಸಬೇಕು ಹಾಗೂ ಕಾಲ ಮಿತಿಯೊಳಗೆ ಅದನ್ನು ಸಾಕಾರಗೊಳಿಸಲು ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯವು. ಅನುಷ್ಠಾನವನ್ನು ತ್ವರಿತಗೊಳಿಸಲು ಅವುಗಳ ಸ್ಥಿತಿಗತಿಗಳ ಪರಾಮರ್ಶೆಗಾಗಿ ಕಾಲಕಾಲಕ್ಕೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅಧಿಕಾರಿಗಳ ಸಭೈಯನ್ನು ಸಹ ನಡೆಸುತ್ತದೆ. ಅಲ್ಲದೆ, ಸರ್ಕಾರದ ಭರವಸೆಗಳ ಬಗ್ಗೆ ಲೋಕಸಭೈಯ 15 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿ ಸಹ ಕಾರ್ಯನಿರ್ವಹಿಸುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin