‘ಮಾತೃಪೂರ್ಣ ಅಲ್ಲ ಕಿಕ್‍ಬ್ಯಾಕ್ ಯೋಜನೆ’

ಈ ಸುದ್ದಿಯನ್ನು ಶೇರ್ ಮಾಡಿ

Sa-Ra-Mahesh--01

ಮೈಸೂರು, ಅ.9-ರಾಜ್ಯಸರ್ಕಾರ ಗರ್ಭಿಣಿ ಹಾಗೂ ಬಾಣಂತಿಯರಿಗೆ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಕಿಕ್‍ಬ್ಯಾಕ್ ಪಡೆಯುವ ಯೋಜನೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯು ಚುನಾವಣಾ ಗಿಮಿಕ್ ಆಗಿದ್ದು, ಕಿಕ್‍ಬ್ಯಾಕ್ ಪಡೆಯುವುದಕ್ಕಾಗಿಯೇ ಜಾರಿಗೆ ತರಲಾಗಿದೆ ಎಂದು ದೂರಿದರು.
ಯಾವುದೇ ಗರ್ಭಿಣಿ ಹಾಗೂ ಬಾಣಂತಿಯರು ಈ ಪೌಷ್ಟಿಕ ಆಹಾರ ಪಡೆಯುವುದಕ್ಕಾಗಿ ಮನೆಯಿಂದ ಹೊರಗೆ ಬರಲು ಸಾಧ್ಯವೇ. ನಮ್ಮ ಸಂಸ್ಕøತಿಯಲ್ಲಿ ಯಾರೂ ಇದನ್ನು ಒಪ್ಪುವುದಿಲ್ಲ ಹಾಗೂ ಆರೋಗ್ಯದ ದೃಷ್ಟಿಯಿಂದ ಬಾಣಂತಿಯರನ್ನು ಹೊರಗೇ ಕಳುಹಿಸುವುದಿಲ್ಲ. ಇಂತಹ ನೈಜ ಸ್ಥಿತಿ ಅರಿಯದ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಈ ಯೋಜನೆ ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.

ಈ ಯೋಜನೆ ಕೇವಲ ಬಂಡವಾಳ ಶಾಹಿಗಳ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. ಅದರ ಬದಲು ಗರ್ಭಿಣಿ ಮತ್ತು ಬಾಣಂತಿಯರ ಖಾತೆಗೆ ಹಣ ಹಾಕಲಿ ಅಥವಾ ಅವರವರ ಮನೆಗೆ ಪೌಷ್ಟಿಕ ಆಹಾರ ತಲುಪಿಸಲಿ ಎಂದು ತಿಳಿಸಿದರು. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಸಾ.ರಾ.ಮಹೇಶ್ ತಿಳಿಸಿದರು.  ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ಜನ 2018ರಲ್ಲಿ ಜೆಡಿಎಸ್‍ನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನಾಂತರವಾದ ಅಂತರ ಕಾಯ್ದುಕೊಳ್ಳಲಿದೆ ಎಂದು ಹೇಳಿದರು.

Facebook Comments

Sri Raghav

Admin