ಮಾಥ್ಯೂ ಚಂಡಮಾರುತ ರೌದ್ರಾವತಾರಕ್ಕೆ 26 ಮಂದಿ ಸಾವು, ದ್ವೀಪರಾಷ್ಟ್ರ ಹೈಟಿ ತತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Mathew

ಕ್ವಾಂಟನಾಮೊ (ಕ್ಯೂಬಾ),ಅ.6-ದಕ್ಷಿಣ ಪೆಸಿಫಿಕ್ ದ್ವೀಪರಾಷ್ಟ್ರ ಹೈಟಿಯಲ್ಲಿ ನಿನ್ನೆ ಕನಿಷ್ಠ 28 ಜನರನ್ನು ಬಲಿತೆಗೆದುಕೊಂಡ ವಿನಾಶಕಾರಿ ಮ್ಯಾಥ್ಯೂ ಚಂಡಮಾರುತ ಪೂರ್ವ ಕರಾವಳಿಯ ಬಹಮಾಸ್ ಮತ್ತು ಫ್ಲೋರಿಡಾದ ಮೇಲೆ ಅಪ್ಪಳಿಸಿತ್ತು ಇನ್ನೊಂದು ರೌದ್ರಾವತಾರದ ದುರಂತ ಆತಂಕ ಮೂಡಿಸಿದೆ.  ಕಳೆದೊಂದು ದಶಕದಿಂದ ಕಂಡು ಕೇಳರಿಯದಿದ್ದ ಅತ್ಯಂತ ಭೀಕರ ಕೆರಿಬಿಯನ್ ಚಂಡಮಾರುತವೆಂದೇ ಬಣ್ಣಿಸಲಾದ ಮ್ಯಾಥ್ಯೂ ಚಂಡಮಾರುತ ಕ್ಯೂಬಾ ಮತ್ತು ಹೈಟಿ ಮೇಲೆ ಗಂಟೆಗೆ 230 ಕಿ.ಮೀ.ಪ್ರಚಂಡ ವೇಗದಲ್ಲಿ ಬಂದೆರಗಿತ್ತು. ಈ ದುರಂತದಲ್ಲಿ ಕನಿಷ್ಠ 26 ಮಂದಿ ಬಲಿಯಾಗಿದ್ದು, ನೂರಾರು ಮನೆಗಳು ನಾಶವಾಗಿವೆ. ಭಾರೀ ಪ್ರಮಾಣದ ಬೆಳೆ ನಷ್ಟವಾಗಿದೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.

ಮ್ಯಾಥ್ಯೂ ಚಂಡಮಾರುತ ಈಗ ಅಮೆರಿಕದ ಬಹಮಾಸ್ ಮತ್ತು ಫ್ಲೋರಿಡಾ ದ್ವೀಪದ ಮೇಲೆ ಬಂದೆರಗಿದ್ದು, ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಕರ್ತರು ಪ್ರಕೃತಿ ವಿಕೋಪ ಎದುರಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin