ಮಾದರಿ ಪಟ್ಟಣವನ್ನಾಗಿ ಮಾಡಲು ಕೈಜೋಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

belagam9

ರಾಯಬಾಗ,ಸೆ.8- ಪಟ್ಟಣವನ್ನು ಅಭಿವೃದ್ಧಿಗೊಳಿಸಿ, ಕರ್ನಾಟಕದಲ್ಲಿಯೇ ಒಂದು ಮಾದರಿ ಪಟ್ಟಣವನ್ನಾಗಿ ಮಾಡಲು ಕನಸನ್ನು ಹೊಂದಿದ್ದು, ಪಟ್ಟಣದ ನಾಗರಿಕರು ಮತ್ತು ಎಲ್ಲ ಸದಸ್ಯರು ಇದಕ್ಕೆ ಕೈಜೋಡಿಸಬೇಕೆಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಮಹಾದೇವ ಗದಾಡಿ ಹೇಳಿದರು. ತಾಲೂಕಿನ ಕಂಕಣವಾಡಿ ಪಟ್ಟಣ ಪಂಚಾಯತ ಸಭಾ ಭವನದಲ್ಲಿ ನಿನ್ನೆ ನಿನ್ನೆ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಟ್ಟಣದಲ್ಲಿರುವ ಸರಕಾರಿ ಗಾಯರಾಣ, ಗಾವಠಾಣ ಜಗಕ್ಕೆ ಸೀಮೆ ಗುರ್ತಿಸಲು ನಿರ್ಧರಿಸಿದ್ದು ಎಲ್ಲ ಸದಸ್ಯರ ಸಹಕಾರಿಸಬೇಕು. 4ನೇ ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ ಬರುವ ಮೂಲಸೌಲಭ್ಯಗಳಾದ ಚರಂಡಿ, ನೀರಿನ ವ್ಯವಸ್ಥೆ, ಬೀದಿ ದೀಪ ಅಳವಡಿಕೆ, ಪ್ರತಿ ವಾರ್ಡಗಳಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದರು.

ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಅವಶ್ಯಕತೆ ಇದ್ದು, ಅವುಗಳ ಮಂಜೂರಾತಿಗಾಗಿ ಪ್ರಯತ್ನಿಸಲಾವುದು. ಸದಸ್ಯರು ತಮ್ಮ ವಾರ್ಡಗಳ ಬಗ್ಗೆ ಯಾವದೇ ಸಮಸ್ಯೆಗಳಿದ್ದರೆ ನೇರವಾಗಿ ಭೇಟಿಯಾಗಿ ಬಗೆಹರಿಸಿಕೊಳ್ಳಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.ಮುಖ್ಯಾಧಿಕಾರಿ ಕೆ.ಎಮ್. ಖಿಲಾರೆ ಅವರು ಸಭೆಯಲ್ಲಿ ಪಟ್ಟಣದ ಪ್ರತಿವಾರ್ಡಗಳ ಜನಸಂಖ್ಯೆ ಸರ್ವೆ, ಪಟ್ಟಣದಲ್ಲಿ ಸೋಲಾರ ದೀಪ ಅಳವಡಿಕೆ, ಚರಂಡಿ ನಿರ್ಮಾಣದ ಚರ್ಚೆಯ ವಿಷಯಗಳ ಕುರಿತು ವರದಿ ಮಂಡಿಸಿದರು.
ತುಕ್ಕಾನಟ್ಟಿ ಬರ್ಡ್ ಸಂಸ್ಥೆಯ ಅಧ್ಯಕ್ಷ ಆರ್.ಎಮ್. ಪಾಟೀಲ ಅವರು ಚೆಕ್ ಡ್ಯಾಂ ಮತ್ತು ನೀರಿನ ಜಲಮಟ್ಟದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಪಾಟೀಲ, ಬರ್ಡ್ ಸಂಸ್ಥೆ ನಿರ್ದೇಶಕ ಸಾಲಿಮಠ, ಪ.ಪಂ. ಸದಸ್ಯರಾದ ಬಾಳಪ್ಪಾ ಅರಬಾವಿ, ತಮ್ಮಣ್ಣ ನಾಯಿಕವಾಡಿ, ಭೀಮಪ್ಪಾ ನಾಯಿಕವಾಡಿ, ಗೋಪಾಲ ಪೂಜರಿ, ನಾಗಪ್ಪಾ ನಂದಿ, ಬಸಪ್ಪಾ ಮಂಗಸೂಳಿ, ಕರೆಪ್ಪಾ ಮೇತ್ರಿ, ನಿಂಗವ್ವ ನಾಯಿಕವಾಡಿ, ದುರ್ಗೆವ್ವ ಮೇತ್ರಿ, ಚಂದ್ರವ್ವ ಬಳ್ಳಾರಿ, ಶಾಂತವ್ವ ಬ್ಯಾಕೂಡ, ಮಹಾದೇವಿ ನಿಡೋನಿ ಹಾಗು ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin