ಮಾದಿಗ ಜನಾಂಗದ ಒಗ್ಗಟನ್ನು ಪ್ರದರ್ಶಿಸಲು ವಿಶೇಷ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu2

ನಂಜನಗೂಡು, ಸೆ.1- ಅಖಿಲ ಕರ್ನಾಟಕ ಆದಿಜಾಂಬವರ(ಮಾದಿಗ) ಸಂಘದ ವತಿಯಿಂದ ಸಂಘಟನೆ, ಹೋರಾಟ, ಒಗ್ಗಟ್ಟು ಮತ್ತು ಜನಾಂಗದ ಸರ್ವತೋಮುಖ ಬೆಳವಣಿಗೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಜನಾಂಗದ ಮುಖಂಡರುಗಳು ವಿಶೇಷ ಸಭೆ ನಡೆಸಿರುವುದು ವರದಿಯಾಗಿದೆ.ಆದಿಜಾಂಬವರ ತಾಲ್ಲೂಕಾಧ್ಯಕ್ಷ ಸಿ.ಬಸವರಾಜು, ನಗರಸಭಾ ಸದಸ್ಯ ಎನ್.ಎಸ್.ಸುಂದರರಾಜು, ಪುರಸಭಾ ಮಾಜಿ ಉಪಾಧ್ಯಕ್ಷ ದೇವರಾಜು, ಕುರಿಹುಂಡಿ ತಾ.ಪಂ.ಸದಸ್ಯೆ ಸುನಂದಾಮಹದೇವಯ್ಯ, ಅಶೋಕಪುರಂ ಯಜಮಾನ ವಾಸು, ಚಂದ್ರ ಸೂರಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ, ಜವರಪ್ಪ, ದೇಬೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕರಿಯಪ್ಪ, ಯಜಮಾನ್ ಅಶೋಕಪುರಂ ಉಮಾಶಂಕರ್, ಮುಂತಾದವರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶೀಘ್ರದಲ್ಲೆ ನಮ್ಮ ಜನಾಂಗಕ್ಕೆ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಮುದಾಯ ಭವನದ ರೀತಿ ಸುಂದರವಾದ ಕಟ್ಟಡವನ್ನು ನಿರ್ಮಿಸುಕೊಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.ನಮ್ಮ ಜನಾಂಗಕ್ಕೆ ಎ.ಜೆ.ಸದಾಶಿವ ಆಯೋಗದ ವರದಿ ರೀತಿ ಒಳಮೀಸಲಾತಿಯನ್ನು ಜಾರಿಗೆ ತರುವ ವಿಚಾರವಾಗಿ ಸಂಘಟನೆ ಮೂಲಕ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ನಮ್ಮ ಜನಾಂಗಕ್ಕೆ ಪದೇ ಪದೇ ಅನ್ಯಾಯವಾಗುತ್ತಿರುವುದನ್ನು ಸಭೆಯಲ್ಲಿ ತೀವ್ರ ಚರ್ಚೆ ನಡೆಸಿ ಎಲ್ಲರು ಒಗ್ಗಟ್ಟು ಪ್ರದರ್ಶಿಸಿದರೆ ಇಂತಹ ಪರಿಸ್ಥಿತಿಗಳನ್ನು, ನಾವು ಎದುರಿಸಿ ನಮ್ಮ ಜನಾಂಗಕ್ಕೆ ಒಳಿತನ್ನು ಮಾಡಬಹುದೆಂದು ಚರ್ಚಿಸಲಾಯಿತು. ಈ ಸಂಬಂಧ ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ವಿ.ಶ್ರೀನಿವಾಸ ಪ್ರಸಾದ್, ಸಂಸದ ಧೃವನಾರಾಯಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರುಗಳನ್ನು ಭೇಟಿ ಮಾಡಿ ಒತ್ತಾಯಿಸಲು ನಿರ್ಧರಿಸಲಾಯಿತು.ಹಾಡ್ಯ ಮಹದೇವಸ್ವಾಮಿ, ಹಂಚಿಪುರ ಸಿದ್ದರಾಜು, ಎಸ್.ಸ್ವಾಮಿ, ದೇಪೇಗೌಡನಪುರ ದೊರೆಸ್ವಾಮಿ, ಕುರಿಹುಂಡಿ ಸಿದ್ದಪ್ಪ, ಅಶೋಕಪುರಂ ಯತ್ತಪ್ಪ, ವಾಸು, ಚಂದ್ರ, ಸೂರಹಳ್ಳಿ ಸಿದ್ದಪ್ಪ, ಜವರಯ್ಯ ನಗರ್ಲೆ ಬಸವರಾಜು, ಹಾಡ್ಯ ಲಿಂಗರಾಜು, ಹುಣಸಣಾಳು ಗುರುಸಿದ್ದಯ್ಯ, ಕುರಿಹುಂಡಿ ಮಹದೇವಸ್ವಾಮಿ, ಕಾಳಯ್ಯ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin