‘ಮಾಧ್ಯಮದ ಅಪಪ್ರಚಾರದಿಂದ ಆತ್ಮಹತ್ಯೆಗೆ ತೀರ್ಮಾನಿಸಿದ್ದೆ’ : ರಾಜು ಕಾಗೆ

ಈ ಸುದ್ದಿಯನ್ನು ಶೇರ್ ಮಾಡಿ

Raju-Kage--01

ಬೆಂಗಳೂರು,ಮಾ.22- ತಮ್ಮ ವಿರುದ್ದ ಮಾಧ್ಯಮಗಳಲ್ಲಿ ಪ್ರಸಾರವಾದ ವಿಚಾರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದೆ ಎಂದು ಶಾಸಕ ರಾಜು ಕಾಗೆ ವಿಧಾನಸಭೆಯಲ್ಲಿ ತಿಳಿಸಿದರು.   ನಿಯಮ 69ರಡಿ ದೃಶ್ಯ ಮಾಧ್ಯಮದವರು ಶಾಸಕರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಹ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ತಮ್ಮನ್ನು ಗೂಂಡಾ ಶಾಸಕರ ಎಂದೆಲ್ಲ ಬಿಂಬಿಸಿದರು.   ಮಾಧ್ಯಮಗಳಲ್ಲಿ ಬಳಸುವ ಶಬ್ದ ಮಾನಮರ್ಯಾದೆ ಹಾಳು ಮಾಡುವಂತಿರುತ್ತದೆ. ನಮ್ಮಗೆ ಪುತ್ರಿಯರಿದ್ದು ಅವರು ಧೈರ್ಯ ತುಂಬಿದರು. ಶಾಸಕರ ಗೌರವ ಹಾಳು ಮಾಡುವ ಮಾಧ್ಯಮಗಳ ಪ್ರಸಾರಕ್ಕೆ ಕಾನೂನು ತರಬೇಕೆಂದು ಮನವಿ ಮಾಡಿದರು.

ಶಾಸಕ ನರೇಂದ್ರ ಸ್ವಾಮಿ ಮಾತನಾಡಿ, ಕಾರಣವಿಲ್ಲದೆ ಸುದ್ದಿ ಸೃಷ್ಟಿಸಿ ತೇಜೋವಧೆ ಮಾಡುತ್ತಾರೆ. ಪ್ರಚೋದನಾತ್ಮಕ ರೀತಿಯಲ್ಲಿ ತಮ್ಮನ್ನು ತೆಗಳುತ್ತಾರೆ. ಸುದ್ದಿ ಸೃಷ್ಟಿಸಿ ಮಾನ ಹಾಳು ಮಾಡಲು ದೃಶ್ಯಮಾಧ್ಯಮ ಬಳಸಬೇಡಿ. ಚಾನಲ್ ಒಂದು ಹೊಸದಾಗಿ ನಮಗೆ ಮಾಕ್ರ್ಸ್ ಕಾರ್ಡ್ ಕೊಡಲು ಮುಂದಾಗಿದೆ. ತಮ್ಮ ಕ್ಷೇತ್ರದಲ್ಲಿ ತಮ್ಮ ವಿರುದ್ದ ಅಪಪ್ರಚಾರದ ಸಿಡಿಯನ್ನು ಸದನಕ್ಕೆ ಒದಗಿಸುತ್ತೇವೆ ಎಂದು ಅಳಲನ್ನು ತೋಡಿಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin