ಮಾನವ ಕಳ್ಳಸಾಗಣೆ : ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Human-Trafficking

ನವದೆಹಲಿ, ಮಾ.26-ದೇಶದಲ್ಲಿ ಮಾನವ ಕಳ್ಳಸಾಗಣೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, 2016ರಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣ ಪಶ್ವಿಮ ಬಂಗಾಳದಲ್ಲಿ ವರದಿಯಾಗಿದೆ. ರಾಜಸ್ತಾನ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಮತ್ತು ಎರಡನೇ ಕ್ರಮಾಂಕದಲ್ಲಿದೆ.   ಕಳೆದ ವರ್ಷ ದೇಶಾದ್ಯಂತ 8,132 ಮಾನವ ಕಳ್ಳಸಾಗಣೆ ಪ್ರಕgಣಗಳು ದಾಖಲಾಗಿದ್ದು, ಪಶ್ಚಿಮಬಂಗಾಳ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಅನುಕ್ರಮವಾಗಿ 3,576 ಮತ್ತು 1,422 ಪ್ರಕರಣಗಳಿವೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ (548) ಮತ್ತು ಮಹಾರಾಷ್ಟ್ರ (517) ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿಯಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ. 75 ಪ್ರಕರಣಗಳಲ್ಲಿ ದೆಹಲಿಯಲ್ಲಿ 66 ಕೇಸ್‍ಗಳು ವರದಿಯಾಗಿವೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಗರಿಷ್ಠ 434 ಪ್ರಕರಣಗಳು ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 404 ಮಾನವ ಕಳ್ಳಸಾಗಣೆ ಕೇಸ್‍ಗಳು ವರದಿಯಾಗಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ರಮವಾಗಿ 239 ಮತ್ತು 229 ಪ್ರಕರಣಗಳಿವೆ. ಕೇರಳದಲ್ಲಿ 21 ಕೇಸ್‍ಗಳು ವರದಿಯಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin