ಮಾನವ ಹಕ್ಕುಗಳ ಆಯೋಗಕ್ಕೆ 63.50 ಲಕ್ಷ ರೂ. ಹಣ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Karnataka-Human-Rights

ಬೆಂಗಳೂರು, ಜ.19- ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ 63.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 480 ಲಕ್ಷ ರೂ.ಗಳನ್ನು ಆಯೋಗಕ್ಕೆ ಒದಗಿಸಲಾಗಿತ್ತು. ಈಗಾಗಲೇ ಕಂತುಗಳ ರೂಪದಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಬಿಡುಗಡೆ ಮಾಡಿದ್ದ ಅನುದಾನ ಬಳಕೆಯಾಗಿದ್ದು, ಸಾಮಾನ್ಯ ವೆಚ್ಚದಡಿ ಒದಗಿಸಿರುವ 127 ಲಕ್ಷದಡಿ ಬಾಕಿ ಉಳಿದಿದ್ದ 63.5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಆಯೋಗ ಕೋರಿದ್ದ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin