ಮಾನಸಿಕ ಅಸ್ವಸ್ಥನ ರಂಪಾಟ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.10-ಮಾನಸಿಕ ಅಸ್ವಸ್ಥನೊಬ್ಬ ತನ್ನ ಮೈಮೇಲಿದ್ದ ವಸ್ತ್ರಗಳನ್ನು ಕಳಚಿ ಸಮೀಪವಿದ್ದ ಸಾರ್ವಜನಿಕರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದ ಮೇಟಗಳ್ಳಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಮಾರು 35-47 ವಯಸ್ಸಿನ ಮಾನಸಿಕ ಅಸ್ವಸ್ಥ ಮೇಟಗಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದು , ಏಕಾಏಕಿ ತನ್ನ ಬಟ್ಟೆಗಳನ್ನು ಕಳಚಿ ಅಲ್ಲೇ ಇದ್ದ ಕೆಲವರಿಗೆ ಕಚ್ಚಿದ್ದಾನೆ. ಅಲ್ಲದೆ ಹಲವರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.   ಇದರಿಂದ ಭಯಭೀತರಾದ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.   ಸ್ಥಳಕ್ಕಾಗಮಿಸಿದ ಪೊಲೀಸರು 108 ಆ್ಯಂಬುಲೆನ್ಸ್‍ನ್ನು ಕರೆಸಿ ಮಾನಸಿಕ ಅಸ್ವಸ್ಥನಿಗೆ ಚುಚ್ಚುಮದ್ದು ನೀಡಿ ನಗರದ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Facebook Comments

Sri Raghav

Admin